ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಂಪಿಂಗ್ ಯಾರ್ಡ್ ಈಗ ಕಲಿ-ನಲಿ ಸೆಲ್ಫಿ ಪಾಯಿಂಟ್ - ಶಾಸಕ ಟೆಂಗಿನಕಾಯಿ ಲೋಕಾರ್ಪಣೆ

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಅವಳಿನಗರದಲ್ಲಿ ಡಂಪಿಂಗ್ ಯಾರ್ಡ್‌ಗಳನ್ನು ಕಲಿ-ನಲಿ ಸೆಲ್ಫಿ ಪಾಯಿಂಟ್ಟ್‌ಗಳನ್ನಾಗಿ ನಿರ್ಮಾಣ ಮಾಡುವ ಕಾರ್ಯ ಜೋರಾಗಿಯೇ ನಡೆದಿದೆ.

ಈ ನಿಟ್ಟಿನಲ್ಲಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವಾರ್ಡ ನಂ.47ರಲ್ಲಿ ಮಹಾನಗರ ಪಾಲಿಕೆ ಹಾಗೂ ಹಸಿರುದಳ ವತಿಯಿಂದ ಡಂಪಿಂಗ್ ಯಾರ್ಡ್ ಗಳಲ್ಲಿ ನಿರ್ಮಿಸಲಾಗಿರುವ ಕಲಿ - ನಲಿ ಸೆಲ್ಫಿ ಪಾಯಿಂಟ್‌ಗಳನ್ನು ಶಾಸಕ ಮಹೇಶ ಟೆಂಗಿನಕಾಯಿ ಲೋಕಾರ್ಪಣೆಗೊಳಿಸಿದರು.

ಇದೇ ವೇಳೆ ವಿಘ್ನೇಶ್ವರ ಶಾಲೆಯ ಮಕ್ಕಳೊಂದಿಗೆ ಸೆಲ್ಫಿ ಕ್ಲಿಕ್ ಮಾಡಿಕೊಂಡು, ಉತ್ತಮ ಪರಿಸರಕ್ಕಾಗಿ ನಾವೆಲ್ಲರೂ ಜಾಗೃತಿ ಮೂಡಿಸೋಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಮಾರ್ಗದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರೂಪಾಶೆಟ್ಟಿ, ಪಾಲಿಕೆ ಸಹಾಯಕ ಆಯುಕ್ತ ಆನಂದ್ ಕಾಂಬಳೆ, ಪ್ರಮುಖರಾದ ಕಾರ್ತಿಕ ಹೊನ್ನಾಪುರ, ಶ್ರೀಧರ್ ಕಂದಗಲ್, ಮಂಜು ಬಮ್ಮಿಗಟ್ಟಿ, ಮೇಘನಾ ಶಿಂಧೆ, ಗಂಗಾ ಅಂಗಡಿ, ಅಭಿಷೇಕ್ ಮೆಹತಾ, ಹಸಿರು ದಳ ತಂಡದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

01/01/2025 08:03 am

Cinque Terre

93.51 K

Cinque Terre

0

ಸಂಬಂಧಿತ ಸುದ್ದಿ