ಹುಬ್ಬಳ್ಳಿ: ಮಹಾನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರಸ್ಥರಿಗೆ 7 ನೇ ವೇತನ ಆಯೋಗದಲ್ಲಿ ಸರಿಯಾಗಿ ಹಂಚಿಕೆಯಾಗಿಲ್ಲ ಮತ್ತು ಹೊಸದಾಗಿ ಸೇರಿದ ನೌಕರಸ್ಥರಿಗೆ ಆರು ತಿಂಗಳಿಂದ ವೇತನ ಆಗಿಲ್ಲ. ಹೀಗೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪಾಲಿಕೆಯ ನೌಕರಸ್ಥರು ಸ್ವಯಂ ಪ್ರೇರಿತರಾಗಿ ಖಜಾನೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರು.
ಇನ್ನು ಎಲ್ಲ ಕರ್ತವ್ಯವನ್ನು ಬಿಟ್ಟು ಪ್ರತಿಭಟನೆಗಿಳಿದ ಪಾಲಿಕೆ ನೌಕರಸ್ಥರು, ಸರಿಯಾದ ಸಮಯಕ್ಕೆ ವೇತನ ಹಾಕುತ್ತಿಲ್ಲ. ಸರಿಯಾಗಿ ಬಡ್ತಿ ನೀಡುತ್ತಿಲ್ಲ ಎಂದು ಪಾಲಿಕೆ ಆಯುಕ್ತರ ವಿರುದ್ಧ ಕಿಡಿ ಕಾರಿ, ಎಲ್ಲ ಕೆಲಸವನ್ನು ಬದಿಗೊತ್ತಿ ಹೋರಾಟಕ್ಕೆ ಮುಂದಾದರು.
Kshetra Samachara
04/01/2025 03:10 pm