ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಗಳಕ್ಕೆ ಬಂದ ಕೊನ್​ಸ್ಟಾಸ್....ಸೂಕ್ತ ಉತ್ತರ ಕೊಟ್ಟ ಬುಮ್ರಾ...ವಿಡಿಯೋ ವೈರಲ್

ಸಿಡ್ನಿ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯ ಮತ್ತೊಮ್ಮೆ ಜಿದ್ದಾಜಿದ್ದಿನ ಕಾದಾಟಕ್ಕೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾದ ಯುವ ಆರಂಭಿಕ ಬ್ಯಾಟರ್ ಸ್ಯಾಮ್ ಕಾನ್‌ಸ್ಟಾಸ್‌ ಹಾಗೂ ಟೀಂ ಇಂಡಿಯಾ ಕ್ಯಾಪ್ಟನ್ ಜಸ್ಪ್ರೀತ್ ಬುಮ್ರಾ ನಡುವಿನ ಮಾತಿನ ಚಕಮಕಿಗೆ ಮತ್ತೋರ್ವ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಬೆಲೆ ತೆತ್ತಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಕೇವಲ 185ಕ್ಕೆ ಆಲೌಟ್ ಆಯಿತು. ದಿನವಿಡೀ ಭಾರತೀಯ ಬ್ಯಾಟರ್‌ಗಳನ್ನು ಆಸ್ಟ್ರೇಲಿಯಾದ ಬೌಲರ್‌ಗಳು ಮಾರಕವಾಗಿ ಕಾಡಿದರು. ಇದಕ್ಕೂ ಮಿಗಿಲಾಗಿ ಪದೇ ಪದೇ ಭಾರತೀಯ ಬ್ಯಾಟರ್‌ಗಳನ್ನು ಕೆದಕುವ ಮೂಲಕ ತಾಳ್ಮೆಗೆ ಭಂಗವನ್ನುಂಟು ಮಾಡುವ ಪ್ರಯತ್ನ ಮಾಡಿದರು.

ಇದಾದ ಬಳಿಕ ಆಸ್ಟ್ರೇಲಿಯಾ ಇನಿಂಗ್ಸ್ ಪ್ರಾರಂಭಿಸಿತು. ಈ ವೇಳೆಯೂ 19 ವರ್ಷದ ಸ್ಯಾಮ್ ಕೊನ್‌ಸ್ಟಸ್ ಮತ್ತು ಭಾರತೀಯ ಆಟಗಾರರ ನಡುವೆ ಬಿಸಿ ಬಿಸಿ ಸನ್ನಿವೇಶ ಮುಂದುವರಿಯಿತು. ನಂತರ ದಿನದಾಟದ ಕೊನೆಯ ಓವರ್‌ನಲ್ಲೂ ನಾನ್-ಸ್ಟ್ರೈಕರ್‌ನಲ್ಲಿದ್ದ ಕೊನ್‌ಸ್ಟಸ್, ಬೂಮ್ರಾ ಜತೆ ಜಗಕ್ಕಿಳಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ಉಂಟಾಯಿತು. ಅಂಪೈರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಇದಕ್ಕೆ ಉತ್ತರವಾಗಿ ದಿನದಾಟದ ಕೊನೆಯ ಎಸೆತದಲ್ಲೇ ಉಸ್ಮಾನ್ ಖ್ವಾಜಾ (2) ಅವರನ್ನು ಹೊರದಬ್ಬಿದ ಬೂಮ್ರಾ, ವಿಕೆಟ್ ಗಳಿಸಿರುವುದನ್ನು ಸಂಭ್ರಮಿಸದೇ, ನೇರವಾಗಿ ಕೊನ್‌ಸ್ಟಸ್ ಅವರತ್ತ ತೆರಳಿ ದಿಟ್ಟಿಸಿ ನೋಡುತ್ತಾ ಆಕ್ರೋಶವನ್ನು ಹೊರಹಾಕಿದರು.

ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕೊನ್‌ಸ್ಟಸ್ ಸಮೀಪದಲ್ಲೇ ಕಿರುಚಾಡಿದರು. ಆ ಮೂಲಕ ಕೆಣಕಲು ಬಂದ ಕೊನ್‌ಸ್ಟಸ್‌ಗೆ ತಕ್ಕ ಉತ್ತರ ನೀಡಿದ್ದಾರೆ. ಸಾಮಾನ್ಯವಾಗಿ ಶಾಂತಚಿತ್ತರಾಗಿರುವ ಬೂಮ್ರಾ ಅಷ್ಟು ಬೇಗ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಆದರೆ ಈ ಘಟನೆಯು ಅಭಿಮಾನಿಗಳಲ್ಲೂ ಕುತೂಹಲಕ್ಕೆ ಕಾರಣವಾಗಿದೆ.

Edited By : Nirmala Aralikatti
PublicNext

PublicNext

03/01/2025 08:13 pm

Cinque Terre

240.08 K

Cinque Terre

3