ಸಿಡ್ನಿ: ಬಾರ್ಡರ್ ಗಾವಾಸ್ಕರ್ ಸರಣಿಯ ಕೊನೆಯ ಪಂದ್ಯ ರೋಚಕ ಘಟಕ್ಕೆ ತಲುಪಿದೆ. ಮೂರನೇ ದಿನವೂ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದು, ನಾಯಕ ಜಸ್ಪ್ರೀತ್ ಬೂಮ್ರಾ ಅನುಪಸ್ಥಿತಿಯಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಭಾರತಕ್ಕೆ ಗೆಲುವಿನ ಆಸೆ ಚಿಗುರಿಸಿದ್ದಾರೆ.
ಎರಡನೇ ದಿನದ ಅಂತ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದ್ದ ಭಾರತ ಸ್ಕಾಟ್ ಬೊಲಾಂಡ್ ಅವರ ಮಾರಕ ದಾಳಿಗೆ ತತ್ತರಿಸಿ, ಕೇವಲ 16 ರನ್ ಸೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಬೊಲಾಂಡ್ 45 ರನ್ ಗಳಿಗೆ 6 ವಿಕೆಟ್ ಗಳಿಸುವ ಮೂಲಕ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದರು. ಪ್ಯಾಟ್ ಕಮಿನ್ಸ್ 44 ರನ್ ಗಳಿಗೆ 3 ವಿಕೆಟ್ ಕಿತ್ತರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ರಿಷಬ್ ಪಂತ್ 61 ರನ್ ಗಳೊಂದಿಗೆ ಅತ್ಯಧಿಕ ಸ್ಕೋರರ್ ಎನಿಸಿದರು.
ಬೆನ್ನು ನೋವಿನಿಂದ ಸ್ಕ್ಯಾನಿಂಗ್‌ಗೆ ಒಳಗಾಗಿದ್ದ ಬೂಮ್ರಾ, ಬ್ಯಾಟಿಂಗ್ ಮಾಡಿದರಾದರೂ ಬೌಲಿಂಗ್ ಮಾಡಲಿಲ್ಲ. ಮೊಹಮ್ಮದ್ ಸಿರಾಜ್ ಬೌಲಿಂಗ್ ನೇತೃತ್ವ ವಹಿಸಿದರು.
PublicNext
05/01/2025 08:06 am