ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಶಾರದಾ ಸಮೂಹ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ - ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ

ಧಾರವಾಡ: ಶಿಕ್ಷಣದ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಭವ್ಯ ಭಾರತದ ಕನಸು ನನಸಾಗಲು ಶಿಕ್ಷಣ ಶಕ್ತಿಯೇ ದೊಡ್ಡದು. ಈ ನಿಟ್ಟಿನಲ್ಲಿ ಶೈಕ್ಷಣಿಕ ಸೇವೆಯಲ್ಲಿ ಸುವರ್ಣ ಮಹೋತ್ಸವ ಆಚರಣೆಗೆ ಧಾರವಾಡದ ವೇಮನ ವಿದ್ಯಾವರ್ದಕ ಸಂಘದ ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಸನ್ನದ್ಧವಾಗಿದೆ. ಶೈಕ್ಷಣಿಕ ಸೇವೆಯಲ್ಲಿ 50 ವರ್ಷಗಳ ಪೂರೈಸಿದ ಶಿಕ್ಷಣ ಸಂಸ್ಥೆಯ ಕೊಡುಗೆ ಅಪಾರವಾಗಿದೆ.

ಬಡವರ ಶ್ರಮಿಕರ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಮಹೋದ್ದೇಶದಿಂದ ನಾಡುಮೆಚ್ಚಿದ ಜನನಾಯಕ, ಸಹಕಾರ ರಂಗದ ಭಿಷ್ಯ ಕೆ.ಎಚ್.ಪಾಟೀಲರು ಕಟ್ಟಿದ ಸಪ್ತಾಪೂರದಲ್ಲಿರುವ ಶಾರದಾ ಸಮೂಹ ಶಿಕ್ಷಣ ಸಂಸ್ಥೆ ಇದೀಗ ಸುವರ್ಣ ಮಹೋತ್ಸವ ಆಚರಿಸುತ್ತಿದೆ.

ಹೌದು.. ಬಡವರ ಜ್ಞಾನ ವಾಸೋಹ ಶಾಲೆ ಎಂದೆ ಗುರುತಿಸಿಕೊಂಡಿರುವ ವೇಮನ ವಿದ್ಯಾವರ್ಧಕ ಸಂಘದ ಈ ಶಾಲೆ ಬಾಲಕಿಯರ ಪ್ರೌಢಶಾಲೆಯಾಗಿ ಆರಂಭಗೊಂಡು ಈಗ ಶಿಕ್ಷಣ ಸಂಸ್ಥೆಗಳ ಸಮೂಹವಾಗಿ ಮಾರ್ಪಟ್ಟು ಹೆಮ್ಮರವಾಗಿ ಬೆಳೆಯುತ್ತಿದೆ. ಶಿಶು ವಿಹಾರದಿಂದ ಹಿಡಿದು ಪದವಿ ಪೂರ್ವ ಕಾಲೇಜುವರೆಗೆ ಶಿಕ್ಷಣ ನೀಡಲಾಗುತ್ತಿದೆ. ಅತ್ಯಾಧುನಿಕ ಸಲಕರಣೆ ಸೌಲಭ್ಯಗಳೊಂದಿಗೆ ನುರಿತ ಸಿಬ್ಬಂದಿ ಹಾಗೂ ಸಮರ್ಹ ಆಡಳಿತ ಮಂಡಳಿಯಿಂದಾಗಿ ಸಂಸ್ಥೆ ಶಿಕ್ಷಣ ಕಾಶಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಹುಟ್ಟು ಹಾಕಿದೆ.

ಇನ್ನು ಇದೇ ಜನವರಿ 3ರಂದು ಸಂಜೆ 4 ಗಂಟೆಗೆ ಧಾರವಾಡದ ಸಪ್ತಾಪುರದಲ್ಲಿರುವ ಸಂಸ್ಥೆಯ ಅವರಣದಲ್ಲಿ ಜರುಗುವ ಸುವರ್ಣ ಮಹೋತ್ಸವ ಸಮಾರಂಭವನ್ನು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಶಾಸನ ರಚನೆ, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ ಪಾಟೀಲ ಉದ್ಘಾಟಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತಿಯಲ್ಲಿ ಜರುಗುವ ಈ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟಿನ ನ್ಯಾಯ ಮೂರ್ತಿ ರವಿ ಹೊಸಮನಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್.ಪಾಟೀಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಎನ್.ಎಚ್. ಕೋನರೆಡ್ಡಿ ಆತಿಥಿಗಳಾಗಿ ಆಗಮಿಸುವರು. ಇದೇ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಹೆಸರಾಂತ ನ್ಯಾಯವಾದಿಗಳು ಹಾಗೂ ರಡ್ಡಿ ಸಹಕಾರ ಬ್ಯಾಂಕಿನ ಚೇರಮನ್ ಕೆ.ಎಲ್.ಪಾಟೀಲರನ್ನು ಸನ್ಮಾನಿಸಲಾಗುವುದು. ವೇಮನ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಡಿ.ಆರ್.ಪಾಟೀಲರು ಅಧ್ಯಕ್ಷತೆ ವಹಿಸಲಿದ್ದಾರೆ.

ಒಟ್ಟಿನಲ್ಲಿ ಶೈಕ್ಷಣಿಕ ಸೇವೆಯಲ್ಲಿ ಅವಿಸ್ಮರಣೀಯ ಸಾಧನೆಯನ್ನು ಮಾಡಿರುವ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ಅದೆಷ್ಟೋ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ಕಲ್ಪಿಸಿರುವ ಶಿಕ್ಷಣ ಸಂಸ್ಥೆ ಇನ್ನೂ ಉತ್ತುಂಗ ಶಿಖರವನ್ನು ಏರಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/01/2025 06:25 pm

Cinque Terre

127.91 K

Cinque Terre

0