ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರಿನಲ್ಲಿ ದರ್ಗಾ ವಿವಾದ ಮತ್ತೆ ಮುನ್ನೆಲೆಗೆ

ಚಿಕ್ಕಮಗಳೂರು: ಕಳೆದ ಶುಕ್ರವಾರ ಸಂಜೆ ಕೋಟೆ ಬಡಾವಣೆಯ ದರ್ಗಾದಲ್ಲಿ ಹೊಸ ಲೈಟ್ ಉರಿಯತ್ತಿದಂತೆಯೇ ಸೃಷ್ಟಿಯಾಗಿದ್ದ ವಿವಾದ ಎರಡು ದಿನ ತಣ್ಣಗಾಗಿತ್ತು. ಇಂದು ಮತ್ತೆ ಯುವಕರು ದರ್ಗಾದ ಕಾಮಗಾರಿಗೆ ವಿರೋಧ ವ್ಯಕಪಡಿಸಿದ್ದ ಹಿನ್ನೆಲೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ದರ್ಗಾದ 200 ಮೀಟರ್ ದೂರದಲ್ಲೇ ರಸ್ತೆ ಬಂದ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಸ್ವಾಮಿಯೇ ಶರಣಂ ಎಂದು ಘೋಷಣೆ ಕೂಗಿ ನಮಗೆ ಅರಳಿಮರ ಸುತ್ತಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ಕೂತಿದ್ದರು. ಅಲ್ಲದೇ ದರ್ಗಾಕ್ಕೆ ಬ್ಯಾರಿಕೇಡ್ ಹಾಕಿ ರಸ್ತೆಯನ್ನು ಯಾಕೆ ಬಂದ್ ಮಾಡಿದ್ರಿ ಎಂದು ಪ್ರಶ್ನಿಸಿದರು. ಈ ವೇಳೆ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಅವರನ್ನು ಬಿಡದೇ ಅಡ್ಡಹಾಕಿದಾಗ ಪೊಲೀಸರು ಹಾಗೂ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ನಡುವೆ ಮಾತಿಗೆ ಮಾತು ಬೆಳೆಯಿತು ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದ ಕಾರಣ ಹೆಚ್ಚಿನ ಪೊಲೀಸರು ನಿಯೋಜನೆ ಮಾಡಲಾಗಿದೆ.

Edited By : Vinayak Patil
PublicNext

PublicNext

06/01/2025 05:20 pm

Cinque Terre

21.89 K

Cinque Terre

0

ಸಂಬಂಧಿತ ಸುದ್ದಿ