ಚಿಕ್ಕಮಗಳೂರು: ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಅಸ್ಸಾಂ ಕಾರ್ಮಿಕರು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೇತೋಟದ ಬಿಳಿಗಿರಿ ಬನ ಎಸ್ಟೇಟ್ ನಲ್ಲಿ ನಡೆದಿದೆ. ಕೀರ್ತಿರಾಜ್ ಹಲ್ಲೆಗೊಳಗಾದ ಗುಡ್ಡೇತೋಟ ಗ್ರಾಮ ಪಂಚಾಯತ್ ಸದಸ್ಯ.
ಹೂವಿನಗುಂಡಿ ಗ್ರಾಮದಲ್ಲಿ ಎರಡು ಎಸ್ಟೇಟ್ ಗಳ ನಡುವೆ ಜಮೀನು ವಿವಾದ ಬಗ್ಗೆ ಕಳೆದ ಹಲವು ವರ್ಷದಿಂದಲೂ ಕೋರ್ಟ್ ನಲ್ಲಿ ವ್ಯಾಜ್ಯವಿತ್ತಂತೆ. ಅದು ಹೈಕೋರ್ಟ್ ನಲ್ಲಿ ಇತ್ಯರ್ಥಗೊಂಡು ಸುಬ್ಬಣ್ಣ ಎನ್ನುವವರ ಸ್ವಾಧೀನದಲ್ಲಿತ್ತು ಎನ್ನಲಾಗಿದೆ. ಆದರೆ, ಇಂದು ತೋಟಕ್ಕೆ ಹೋದ ಸಂದರ್ಭದಲ್ಲಿ ಏಕಾಏಕಿ ಕೀರ್ತಿರಾಜ್ ಮೇಲೆ ಎಸ್ಟೇಟ್ ನ ಮ್ಯಾನೇಜರ್ ಹಾಗೂ ಅಸ್ಸಾಂ ಕಾರ್ಮಿಕರು ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗುತ್ತಿದೆ. ಹಲ್ಲೆಗೊಳಗಾದ ಗ್ರಾಮ ಪಂಚಾಯತ್ ಸದಸ್ಯ ಆಸ್ಪತ್ರೆಗೆ ದಾಖಲಾಗಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
07/01/2025 09:50 am