ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮುಖ್ಯವಾಹಿನಿಗೆ ಬಂದು ಉಸಿರಿರುವವರೆಗೂ ಹೋರಾಟ ಮಾಡ್ತೀವಿ - ನಕ್ಸಲ್ ನಾಯಕಿ ಮುಂಡಗಾರು ಲತಾ

ಚಿಕ್ಕಮಗಳೂರು: ನಕ್ಸಲರು ಸಮಾಜದ ಮುಖ್ಯ ವಾಹಿನಿಗೆ ಬರುಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ನಕ್ಸಲ್ ನಾಯಕಿ ಮುಂಡಗಾರು ಲತಾ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿರುವ ವಿಡಿಯೋ ಇದೀಗ ಲಭ್ಯವಾಗಿದೆ. ಪ್ರಜಾತಾಂತ್ರಿಕ ಹಾಗೂ ಸಂವಿಧಾನ ಪರ ಹೋರಾಟ ಮಾಡಲು ಬಯಸುತ್ತೇವೆ. ಅದೇ ರೀತಿ ಕೊನೆ ಉಸಿರು ಇರೋವರೆಗೂ ಜನರ ಪರ ಹೋರಾಟ ಮಾಡ್ತೇವೆ ಎಂದು ಮಾತಾನಾಡಿರುವ ವಿಡಿಯೋ ಲಭ್ಯವಾಗಿದೆ. ಜನರ ಪರ ಕೊನೆ ತನಕ ನಿಲ್ತೀವಿ. ಜನರಿಗಾಗಿ ಹೋರಾಟದಿಂದ ಹಿಂದೆ ಸರಿಯಲ್ಲ, ನಮ್ಮ ಉಸಿರು ಇರುವವರೆಗೂ ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಹೋರಾಡ್ತೀವಿ ಕರ್ನಾಟಕ, ಕೇರಳ, ತಮಿಳುನಾಡಿನ ಆರು ಜನ ಈ ಬಗ್ಗೆ ಚರ್ಚೆ ಮಾಡಿದ್ದೇವೆ.

ಅಲ್ಲಿನ ಸ್ಥಿತಿಗಳ ಬಗ್ಗೆ ಸಮಿತಿಯವರು ಮನವರಿಕೆ ಮಾಡಿಸಿದ್ದಾರೆ. ಎಲ್ಲರೂ ಎಲ್ಲಾ ಕಾಮ್ರೇಡ್ಸ್ ಕೂಡ ಸ್ವಾಗತಿಸುತ್ತೇವೆ. ಸರ್ಕಾರ ಕೊಟ್ಟ ಭರವಸೆಗಳನ್ನ ಈಡೇರಿಸುತ್ತೆ ಅನ್ನೋ ನಂಬಿಕೆ ಇದೆ. ಅದೇ ಭರವಸೆಯೊಂದಿಗೆ ಸಮಿತಿಯವರು ಎಲ್ಲರೂ ಶ್ರಮ ಹಾಕಿದ್ದಾರೆ ಎಂದು ನಕ್ಸಲ್ ನಾಯಕಿ ಮುಂಡಗಾರು ಲತಾ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿರುವ ಇದೀಗ ಲಭ್ಯವಾಗಿದೆ.

Edited By : Shivu K
PublicNext

PublicNext

08/01/2025 07:39 am

Cinque Terre

30.01 K

Cinque Terre

1

ಸಂಬಂಧಿತ ಸುದ್ದಿ