ಚಿಕ್ಕಮಗಳೂರು: ಪಶ್ಚಿಮಘಟ್ಟಗಳ ರಮಣೀಯ ಪ್ರಕೃತಿಯ ಬೀಡು, ಎತ್ತ ಕಣ್ಣಾಯಿಸಿದ್ರೂ ಅತ್ತ ಸುಂದರ ಪರಿಸರ ಕಣ್ಣಿಗೆ ರಾಚುತ್ತೆ. ಇದೇ ಪರಿಸರವೇ ಒಂದು ಕಾಲದಲ್ಲಿ ನಕ್ಸಲ್ ಹುಟ್ಟಿಗೆ ಕಾರಣವಾಯ್ತು. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಬೇರೂರಿದ್ದ ನಕ್ಸಲ್ ಚಟುವಟಿಕೆ ಇದೀಗ ಯುಗಾಂತ್ಯವಾಗುತ್ತಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಗೆ ಬಲಿಯಾದ ಬಳಿಕ ಕಾಡಿನಲ್ಲಿ ಬಂದೂಕು ಹಿಡಿದು ಹೋರಾಟ ನಡೆಸಿದೋರು ನಾಡಿನತ್ತ ಮುಖ ಮಾಡ್ತಾ ಇದ್ದಾರೆ. ಸರ್ಕಾರ ಶರಣಾಗತಿ ಪ್ಯಾಕೇಜ್ ನ ಅಡಿಯಲ್ಲಿ ಇಂದು 6 ಮಂದಿ ನಕ್ಸಲರು ಶರಣಾಗತಿ ಆಗುವ ಮೂಲಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗೆ ಮಂಗಳಹಾಡಿದ್ದಾರೆ.
ಎರಡೂವರೆ ದಶಕಗಳ ವನವಾಸದ ಬದುಕಿಗೆ ಮಂಗಳ ಹಾಡೋಕೆ ತೀರ್ಮಾನಿಸಿರೋ ಎ ಹಾಗೂ ಬಿ ಕೆಟಗರಿಯ 6 ಜನ ನಕ್ಸಲರು ಶರಣಾಗಿದ್ದಾರೆ. ಶಾಂತಿಗಾಗಿ ನಾಗರೀಕ ವೇದಿಕೆಯ ಮೂಲಕ ಶರಣಾಗತಿ ಆಗಿದ್ದಾರೆ.ಕಳೆದ ಎರಡೂವರೆ ದಶಕದಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ಮುಂಡುಗಾರು ಲತಾ,(ಮುಂಡಗಾರು ಶೃಂಗೇರಿ ಚಿಕ್ಕಮಗಳೂರು ) ವನಜಾಕ್ಷಿ (ಬಾಳೆಹೊಳೆ ಕಳಸ ಚಿಕ್ಕಮಗಳೂರು ), ಸುಂದರಿ (ಕುಂತಲೂರು ದಕ್ಷಿಣ ಕನ್ನಡ) ಮಾರಪ್ಪ ಅರೋಳಿ ಅಲಿಯಾಸ್ ಜಯಣ್ಣ (ರಾಯಚೂರು ), ವಸಂತ (ತಮಿಳುನಾಡು) ಎನ್.ಜೀಶಾ (ಕೇರಳ) ಶರಣಾಗತಿ ಆಗುವ ಮೂಲಕ ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ಯುಗಾಂತ್ಯ ಆಗಿದೆ.
ಚಿಕ್ಕಮಗಳೂರಿನಲ್ಲಿ ಇಂದು ಆರು ಮಂದಿ ನಕ್ಸಲರು ಶರಣಾಗತಿಗೆ ಮೂಹೂರ್ತ ಫಿಕ್ಸ್ ಅಗಿತ್ತು. ಬೆಳಗ್ಗೆಯಿಂದಲೂ ಜಿಲ್ಲಾಡಳಿತ ಸಿದ್ಧತೆಯನ್ನು ಮಾಡಿಕೊಂಡಿತ್ತು. ನಕ್ಸಲರ ಸಂಬಂಧಿಕರ ಆಗಮನ, ಶರಣಾಗತಿ ಕಮಿಟಿ, ಶಾಂತಿಗಾಗಿ ನಾಗರೀಕ ವೇದಿಕೆಯ ಲೀಡರ್ ಎಂಟ್ರಿ. ಕ್ರಾಂತಿಗೀತೆಗಳು ಪ್ರವಾಸಿಮಂದಿರದಲ್ಲಿ ಕೇಳಿಬಂದ್ವು. ಆದ್ರೆ ಏಕಾಏಕಿ ಈ ಪ್ರೋಗ್ರಾಂ ಬದಲಾಗಿ ಮುಖ್ಯಮಂತ್ರಿ ಗೃಹಕಚೇರಿಯತ್ತ ತೆರಳಿದ್ರು ನಕ್ಸಲರು.ಇದಕ್ಕೆ ಪ್ರಮುಖವಾದ ಕಾರಣ ಎನ್ ಐ ಎ ಅಧಿಕಾರಿಗಳ ಎಂಟ್ರಿ. ಶರಣಾಗತಿ ಆಗುವ ನಕ್ಸಲರನ್ನು ಎನ್ ಐ ಎ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಶಿಫ್ಟ್ ಆಯಿತು ಎಂದು ಹೇಳಲಾಗುತ್ತಿದೆ.
ಇನ್ನೂ ಆರು ಮಂದಿ ನಕ್ಸಲರು ಶರಣಾಗ್ತಾ ಇರೋದ್ರಿಂದ ಅವ್ರ ಸಂಬಂಧಿಕರು ಹಾಗೂ ಆಪ್ತರು ಪ್ರವಾಸಿ ಮಂದಿರ ಸಮೀಪ ಜಮಾಯಿಸಿದ್ರು..ಎಲ್ಲರೂ ಎರಡು ದಶಕಗಳಿಂದ ತಮ್ಮ ಮನೆಯ ಸದಸ್ಯನನ್ನ ಮತ್ತೇ ನೋಡ್ತಾ ಇದ್ದೀವಿ ಅಂತಾ ಖುಷಿ ಹಂಚಿಕೊಂಡ್ರು. ಏಕಾಏಕಿ ಶರಣಾಗತಿ ಸ್ಥಳ ಬದಲಾಗಿದ್ದು ಗೊಂದಲಕ್ಕೀಡಾದ್ರು..ಕೊನೆಗೂ ಸಿಎಂ ಸೂಚನೆಯಂತೆ ಪೊಲೀಸ್ ವಾಹನದಲ್ಲಿಯೇ ಬೆಂಗಳೂರಿಗೆ ಕರೆದೊಯ್ಯಲಾಯ್ತು .
ಒಟ್ಟಾರೆ ಏಕಾಏಕಿ ನಿಗದಿಯಾಗಿದ್ದ ಶರಣಾಗತಿ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಮುಖ್ಯಮಂತ್ರಿ ಕಚೇರಿಗೆ ಶಿಫ್ಟ್ ಅಯ್ತು..ಏಕೆ ಏನೂ ಎಂಬ ಕಾರಣಕ್ಕಂತೂ ಸ್ಪಷ್ಟ ಉತ್ತರ ನೀಡಲಿಲ್ಲ. ಇದ್ರ ನಡುವೆ ಎನ್ ಐ ಎ ಅಧಿಕಾರಿಗಳು ನಕ್ಸಲರ ಬೆನ್ನು ಹತ್ತಿದ್ದಾರೆ..ಎಲ್ಲವಕ್ಕೂ ಶರಣಾಗತಿಯ ನಂತ್ರವಷ್ಟೆ ಉತ್ತರ ಸಿಗಬೇಕಾಗಿದೆ.
ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು
PublicNext
08/01/2025 11:01 pm