ಚಿಕ್ಕಮಗಳೂರು : 6 ಜನ ನಕ್ಸಲರು ಮುಖ್ಯವಾಹಿನಿ ಬರುತ್ತಿರುವುದು ತುಂಬಾ ಸಂತೋಷವಾಗ್ತಿದೆ ಎಂದು ಸಮಾಜ ಮುಖ್ಯವಾಹಿನಿಗೆ ಬಂದಿರುವ ಮಾಜಿ ನಕ್ಸಲ್ ಸಿರಿಮನೆ ನಾಗರಾಜ್ ತಿಳಿಸಿದ್ದಾರೆ. ಹೋರಾಟದ ಗುರಿ ಇಟ್ಟುಕೊಂಡು ಮುಖ್ಯವಾಹಿನಿಗೆ ಬರುತ್ತಿದ್ದಾರೆ.
ಈ ಹಿಂದೆ 2014 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ನಮ್ಮನ್ನು ಮುಖ್ಯ ವಾಹಿನಿಗೆ ಕರೆ ತಂದಿದ್ದರು. ನಮ್ಮ ನಂತರ ಮುಖ್ಯ ವಾಹಿನಿಗೆ ಬಂದವರಿಗೆ ಸರಿಯಾದ ಪ್ಯಾಕೇಜ್ ಸಿಕ್ಕಿಲ್ಲ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇದು ಸಮಾಜಕ್ಕೆ ಉತ್ತಮ ಸಂದೇಶ ಎಂದು ಮಾಜಿ ನಕ್ಸಲ್ ಸಿರಿಮನೆ ನಾಗರಾಜ್ ತಿಳಿಸಿದ್ದಾರೆ.
PublicNext
08/01/2025 02:49 pm