ಚಿಕ್ಕಮಗಳೂರು: ನೋಡಿ ಪೊಲೀಸ್ ಭದ್ರತೆ ಹೇಗಿದೆ ನೋಡಿ. ಇದನ್ನೂ ನೋಡಿ ದಾರಿಯಲ್ಲಿ ಹೆಣ ಹೋಗೋದಕ್ಕೂ ಪೊಲೀಸರು ಹೇಗೆ ಅಡ್ಡ ನಿಂತಿದ್ದಾರೆ ಅಂತ. ನಗರಸಭೆ ಅಧ್ಯಕ್ಷೆಗೂ ಬಿಡಲ್ಲ ಅಂತಿರೋ ಖಾಕಿಪಡೆ. ಸ್ವಾಮಿ ಅರಳಿ ಮರ ಸುತ್ತಬೇಕು ಬಿಡಿ ಅಂತಿರೋ ಅಯ್ಯಪ್ಪಸ್ವಾಮಿ ಮಾಲಾಧಾರಿಗೂ ಎಲ್ಲರಿಗೂ ನೋ ಎಂಟ್ರಿ ಅಂತಾ ಇರೋ ಪೊಲೀಸರು. ಇದೇನು ಅಂತಹಾ ಭದ್ರತೆ ಅಂತೀರಾ. ಕಾರಣ ಇಷ್ಟೆ.
ಈ ದರ್ಗಾ ನಮ್ದು ಅಂತ ಮುಸ್ಲಿಮರು ಕೆಲಸ ಮಾಡ್ತಿದ್ದಾರೆ. ಆದ್ರೆ, ಹಿಂದೂಗಳು ಇದು ದರ್ಗಾ ಜಾಗವಲ್ಲ. ಪ್ರಕರಣ ಕೋರ್ಟ್‌ನಲ್ಲಿದೆ. 30 ವರ್ಷಗಳಿಂದ ಇದು ವಿವಾದಿತ ಜಾಗ. ಅಕ್ರಮವಾಗಿ ದರ್ಗಾ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಆದ್ರೆ, ಮುಸ್ಲಿಮರು 1996ನೇ ಇಸವಿಯಿಂದ ಪ್ರತಿ ಡಿಸೆಂಬರ್‌ನಲ್ಲಿ ಮಾತ್ರ ಕೆಲಸ ಮಾಡಿರೋದು. ಕಾರಣ, ಕೋಟೆ ಏರಿಯಾದ 1200 ಮನೆಗಳಲ್ಲಿ ಒಂದೇ ಒಂದು ಮುಸ್ಲಿಂ ಮನೆ ಇಲ್ಲ. ಇಲ್ಲಿರೋರೆಲ್ಲಾ ಶಬರಿಮಲೆ ಅಯ್ಯಪ್ಪಸ್ವಾಮಿ ಮಾಲೆ ಹಾಕಿರುತ್ತಾರೆ. ಯಾರೂ ಜಗಳಕ್ಕೆ ಬರಲ್ಲ. ವಿರೋಧ ಮಾಡಲ್ಲ ಎಂದು ಸ್ಥಳೀಯ ನಗರಸಭೆ ಸದಸ್ಯ ಆಕ್ರೋಶ ಹೊರಹಾಕಿದ್ದಾರೆ.
ಆದ್ರೆ, ಸ್ಥಳ ಪರಿಶೀಲನೆಗೆ ಬಂದ ನಗರಸಭೆ ಅಧ್ಯಕ್ಷೆಗೂ ದರ್ಗಾ ಬಳಿ ಹೋಗಲು ಪೊಲೀಸರು ಅನುಮತಿ ನೀಡಲಿಲ್ಲ. ಇದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಯ್ತು. ನೀವು ರಸ್ತೆಗೆ ಏಕೆ ಬ್ಯಾರಿಕೇಡ್ ಹಾಕಿದ್ದೀರಾ? ದರ್ಗಾ ಗೇಟಿಗೆ ಬೀಗ ಹಾಕಿ ಎಂದು ಬಿಜೆಪಿಗರು ಕಿರಿಕಾರಿದ್ರು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸ್ವಾಮಿ... ಶಬರಿಮಲೆ ಹೊರಟಿದ್ದೇವೆ. ಗಣಪತಿ ದೇವಸ್ಥಾನಕ್ಕೆ ಹೋಗಿ ಅರಳಿಮರ ಸುತ್ತಿ ಹೋಗ್ತೀವಿ. 14 ಮಾಲಾಧಾರಿಗಳನ್ನ ಮಾತ್ರ ಬಿಡಿ ಎಂದು ಪೊಲೀಸರು ಬಿಡ್ಲಿಲ್ಲ. ದರ್ಗಾದ 200 ಮೀಟರ್ ದೂರದಲ್ಲಿ ರಸ್ತೆಯ ಎರಡೂ ಬದಿಯಲ್ಲೂ ನೂರಾರು ಪೊಲೀಸರು ಕಾವಲಿದ್ರು. ಬಿಜೆಪಿಯವರು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ರು. ಆದ್ರೆ, ಪೊಲೀಸರ ಕಾವಲಿನಲ್ಲಿ ದರ್ಗಾದಲ್ಲಿ ಕೆಲಸ ಮಾತ್ರ ಯಾವುದೇ ನಿರ್ವಿಘ್ನವಿಲ್ಲದೆ ಆಯ್ತು. ಅದೇ ಮಾರ್ಗದಲ್ಲೇ ಬಂದ ಹೆಣ ಹೋಗೋದಕ್ಕೂ ಪೊಲೀಸರು ಅವಕಾಶ ನೀಡದಿದ್ದಕ್ಕೆ ಬಿಜೆಪಿಗರು ಪೊಲೀಸರು ಮತ್ತು ಸರ್ಕಾರ ಮುಸ್ಲಿಮರ ಓಲೈಕೆಗೆ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ಆದ್ರೆ, ನಗರಸಭೆ ಅಧ್ಯಕ್ಷೆ ಕೂಡ ನಾನು 30 ವರ್ಷದಿಂದ ಇಲ್ಲೇ ಇದ್ದೇನೆ. ಇಲ್ಲಿ ಒಂದು ಮುಸ್ಲಿಂ ಮನೆ ಇಲ್ಲ. ದರ್ಗಾ ಎಲ್ಲಿಂದ ಹೇಗೆ ಬಂತು ಎಂದು ಆಕ್ರೋಶ ಹೊರಹಾಕಿದ್ರು
ಓಟ್ಟಾರೆ ಈ ದರ್ಗಾ ಕಾಮಗಾರಿ ಚಿಕ್ಕಮಗಳೂರಿನಲ್ಲಿ ಹೊಸ ವಿವಾದ ಸೃಷ್ಟಿಸಿದ್ದು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವುದಂತೂ ಸುಳ್ಳಲ್ಲ.
-ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು
PublicNext
07/01/2025 10:24 am