ಚಿಕ್ಕಮಗಳೂರು: ಪುನರ್ವಸತಿ ಪ್ಯಾಕೇಜ್ ಅರ್ಧದಷ್ಟು ಹಣವನ್ನು ಹುಟ್ಟೂರಿನಲ್ಲಿ ತಾನು ಓದಿದ ಕಿರಿಯ ಪ್ರಾಥಮಿಕ ಶಾಲೆಗೆ ನೀಡುವುದಾಗಿ ನಕ್ಸಲ್ ನಾಯಕ ಮಾರಪ್ಪ ಅರೋಳಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ಸಮಾಜದ ಮುಖ್ಯ ವಾಹಿನಿಗೆ ಬರಲು ಬಯಸಿರುವ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಅರೋಳಿ ಗ್ರಾಮದ ಮಾರಪ್ಪ ಈ ಬಗ್ಗೆ ವಿಡಿಯೋ ತುಣುಕು ಬಿಡುಗಡೆ ಮಾಡಿದ್ದಾರೆ.
'ಶಾಂತಿಗಾಗಿ ನಾಗರಿಕ ವೇದಿಕೆ' ಸರ್ಕಾರ ನೇತೃತ್ವದ ಸಮಿತಿ ಪುನರ್ವಸತಿ ಪ್ಯಾಕೇಜ್ ನೀಡಿಕೆ ಮತ್ತು ತಾವು ಇಟ್ಟಿರುವ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಮನವರಿಕೆ ಮಾಡಿಕೊಡುವಲ್ಲಿ ತೀವ್ರ ಗತಿಯಲ್ಲಿ ಶ್ರಮವಹಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಆಶಯಗಳ ಕುರಿತು ಸಹಮತ ಕಂಡುಬಂದ ಹಿನ್ನೆಲೆ ಶರಣಾಗತಿಗೆ ಮುಂದೆ ಬಂದಿರುವುದಾಗಿ ಹೇಳಿದ್ದಾರೆ.
PublicNext
08/01/2025 08:52 am