ಚಿಕ್ಕಮಗಳೂರು: ದಶಕಗಳ ಕಾಲ ಭೂಗತರಾಗಿದ್ದ ಆರು ನಕ್ಸಲರು ಶರಣಗತಿಗೆ ವೇದಿಕೆಯ ಸಿದ್ಧವಾಗಿದೆ. ಶಾಂತಿಗಾಗಿ ನಾಗರೀಕ ವೇದಿಕೆ ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುಧೀರ್ಘ ಮಾತುಕತೆ ಫಲಪ್ರದವಾಗಿದ್ದು ನಾಳೆ ಆರು ಜನ ನಕ್ಸಲರು ಮುಖ್ಯ ವಾಹಿನಿಗೆ ಬರಲಿದ್ದಾರೆ.
ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ ಕೆ ವಸಂತ, ಟಿ ಎನ್ ಜೀಶ್ ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದು ಈ ಬಗ್ಗೆ ಶಾಂತಿಗಾಗಿ ನಾಗರೀಕ ವೇದಿಕೆ ಪ್ರಮುಖರಾದ ಕೆ.ಎಲ್ ಅಶೋಕ್ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
ರಾಜ್ಯ ಸರಕಾರ ನಕ್ಸಲರ ಪ್ರಮುಖ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದು ಅವುಗಳಲ್ಲಿ ಪ್ರಮುಖವಾಗಿ ಮಲೆನಾಡಿನ ಅರಣ್ಯ ಇಲಾಖೆ ಕಿರುಕುಳ, ಗಿರಿಜನರಿಗಾಗಿ ಭೂಮಿ, ದಲಿತರಿಗಾಗಿ ವಸತಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಶರಣಾಗಲಿರುವ ನಕ್ಸಲರು ಮುಂದೆ ಇಟ್ಟಿದ್ದಾರೆ ಈ ಬಗ್ಗೆ ನಮ್ಮ ಪ್ರತಿನಿಧಿ ಕೆ.ಎಲ್ ಅಶೋಕ್ ಜೊತೆ ನಡೆಸಿರುವ ಚಿಟ್ ಚಾಟ್ ಇಲ್ಲಿದೆ.
PublicNext
07/01/2025 03:55 pm