ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಬಸ್ ಸೌಕರ್ಯ ಕಲ್ಪಿಸಲು ಮನವಿ

ಬೈಲಹೊಂಗಲ: ತಾಲೂಕಿನ ನಾನಾ ಗ್ರಾಮಗಳಲ್ಲಿನ ಸಾರಿಗೆ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸಿ  ಪಿ ಎಸ್ ಆರ್ ಮಾನವ ಹಕ್ಕುಗಳ ಸಂರಕ್ಷಣಾ ಮಂಡಳಿಯ ಭ್ರಷ್ಟಾಚಾರ ವಿಭಾಗದ ಕಾರ್ಯಕರ್ತರು ಪಟ್ಟಣದ ಡಿಪೋಗೆ ತೆರಳಿ ಘಟಕ  ವ್ಯವಸ್ಥಾಪಕ ಹಾಗೂ ತಹಶೀಲ್ದಾರ್ ಎಚ್ ಎನ್ ಶಿರಹಟ್ಟಿ ಅವರಿಗೆ  ಸೋಮವಾರ ಮನವಿ ಸಲ್ಲಿಸಿದರು.

ಪಿ ಎಸ್ ಆರ್ ಮಾನವ ಹಕ್ಕುಗಳ ಉತ್ತರ ಕರ್ನಾಟಕದ ಅಧ್ಯಕ್ಷ ಅರ್ಬಾಜಅಹ್ಮದ ಮುಲ್ಲಾ ಮಾತನಾಡಿ, ತಾಲೂಕಿನ ಅನೇಕ ಗ್ರಾಮಗಳಿಗೆ  ಸೂಕ್ತ ವೇಳೆ ಬಸ್ ಸೌಲಭ್ಯ ಇಲ್ಲವಾಗಿದ್ದು, ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದೆ. ನಿರ್ವಾಹಕರು ವಿದ್ಯಾರ್ಥಿಗಳೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ಬಸ್ ತಂಗುದಾನದಲ್ಲಿ ಬಸ್ ನಿಲ್ಲಿಸಬೇಕು.ವಿದ್ಯಾರ್ಥಿಗಳು ಪಾಸ್ ಸೌಲಭ್ಯ ಹೊಂದಿದ್ದರೂ ಖಾಸಗಿ ವಾಹನಗಳಿಗೆ ಹೆಚ್ಚು ಹಣ ಭರಿಸಿ ಶಾಲಾ ಕಾಲೇಜುಗಳಿಗೆ ತೆರಳುವ ದುಃಸ್ಥಿತಿ ಎದುರಾಗಿದೆ ಎಂದು ಆರೋಪಿಸಿದರು.

ವ್ಯವಸ್ಥಾಪಕರು, ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸದಿದ್ದರೆ ಸಮಸ್ಯೆ ಇರುವ ಗ್ರಾಮಗಳಲ್ಲಿ ಸಂಚಾರ ತಡೆ ನಡೆಸಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿ ಘಟಕದ ಅಧ್ಯಕ್ಷ ಇಲಾಹಿ ಯರಗಟ್ಟಿ, ಸಾ ಕೀಬ ಬಹದ್ದೂರಶೀ, ಮೊಹಮ್ಮದ ರಫೀಕ ಹಕ್ಕಿ, ಸೊಹೈಲ ಪಾಟೀಲ, ಮುಸ್ತಾಕ ಹತ್ತಿಕಟಗಿ ಇದ್ದರು.

Edited By : PublicNext Desk
Kshetra Samachara

Kshetra Samachara

06/01/2025 03:23 pm

Cinque Terre

4.52 K

Cinque Terre

0

ಸಂಬಂಧಿತ ಸುದ್ದಿ