ಬೈಲಹೊಂಗಲ : ಸಮೀಪದ ಮುರಗೋಡ ಪೊಲೀಸ್ ಠಾಣೆ ಕ್ರಾಸ್ ನಿಂದ ಚಳಕೊಪ್ಪ ತೋಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಕ್ಕ-ಪಕ್ಕದ ನಿವಾಸಿಗಳ ಮನೆಗಳ ಮುಂದಿನ ರಸ್ತೆ ಮತ್ತು ಗಟಾರಗಳನ್ನು ದುರಸ್ಥಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹಲವು ತಿಂಗಳುಗಳಿಂದ ಇಲ್ಲಿನ ಗಟಾರ್ ಕಲ್ಲು-ಮಣ್ಣು ಹಾಗೂ ತ್ಯಾಜ್ಯದಿಂದ ಮುಚ್ಚಿ ಹೋಗುತ್ತಿದ್ದು, ಮಲೀನ ನೀರು ಸರಾಗವಾಗಿ ಸಾಗದೆ ಇರುವುದರಿಂದ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಇಲ್ಲಿನ ಹದಗೆಟ್ಟ ರಸ್ತೆಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ.
ನಿರ್ಮಾಣ ಮಾಡಲಾಗಿದ್ದ ಗಟಾರ್ ಮತ್ತು ರಸ್ತೆ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದರಿಂದ ಆಗಾಗ ಹದಗೆಡುತ್ತಿರುವುದು ಸಾಮಾನ್ಯವಾಗಿದೆ. ಕಳಪೆ ಮಟ್ಟದ ಕಾಮಗಾರಿ ಮಾಡಿ ವಂಚಿಸಿ ಕೈ ತೊಳೆದುಕೊಂಡ ಗುತ್ತಿಗೆದಾರರು ಹಾಗೂ ಸಂಭಂದಿಸಿದ ಗ್ರಾ.ಪಂ. ಅಧಿಕಾರಿಗಳು, ಜನಪ್ರತಿನಿಧಿಗಳು ವಂಚಿಸಿ ಜಾನ ಮೌನ ತಾಳಿದ್ದು, ಸರಿಯಾದ ದುರಸ್ತಿ ಮಾಡಬೇಕೆಂಬ ಪರಿಜ್ಞಾನವಿಲ್ಲದೆ ಜನರ ಜೀವದ ಜೊತೆ ಚಲ್ಲಾಟ ಆಡುತ್ತಿದ್ದಾರೆಂದು ಜನತೆ ರೋಶಿಹೋಗಿ ದೂರಿದ್ದಾರೆ.
ಜನಹಿತ ಕಾಪಾಡಲು ಇನ್ನಾದರು ಸಂಬಂಧಿಸಿದವರು ಮುತುವರ್ಜಿ ವಹಿಸಿ ಅಪಾಯಕ್ಕೆ ಎಡೆಮಾಡಿಕೊಡುವ ರಸ್ತೆ, ಮತ್ತು ಚರಂಡಿ ದುರಸ್ಥಿ ಗೊಳಿಸುವಂತೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲದಿದ್ದಲಿ ಉಗ್ರ ಹೋರಾಟಕ್ಕಿಳಿಯುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
Kshetra Samachara
03/01/2025 06:53 pm