ಬೈಲಹೊಂಗಲ: ಸಮೀಪದ ಮಲ್ಲೂರ ಗ್ರಾಮದ ಕೆಇಬಿ ಹತ್ತಿರ ಮಲ್ಲೂರ ಯಕ್ಕುಂಡಿ ಕಾರಲಕಟ್ಟಿ ತಾಂಡೆ ಗ್ರಾಮಗಳ ಗುಡ್ಡದ ಹೊಲಗಳ ರೈತರು ಸಾಕಷ್ಟು ತಿಂಗಳುಗಳಿಂದ ತಮ್ಮ ಗುಡ್ಡದ ಹೊಲಗಳಲ್ಲಿ ಬೆಳೆದ ಕಬ್ಬನ್ನು ಕಡೆಸಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ಎಂದು ಅಗ್ರಹಿಸಿ ಕಬ್ಬಿನ ಟ್ರ್ಯಾಕ್ಟರ್ ಗಳನ್ನು ತಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿನ ಅವಧಿ ಮುಗಿದು ಕಬ್ಬಿನ ಇಳುವರಿ ಕಡಿಮೆ ಬರುತ್ತದೆ ಮತ್ತು ಪ್ರತಿ ವರ್ಷ ಇದೇ ಸಮಸ್ಯೆ ಆಗಿದೆ ಎಂಬುವದು ರೈತರ ಪ್ರಶ್ನೆ...ಕೇಳಿದ್ರೆ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಗುಡ್ಡದ ಹೊಲಗಳ ರೈತರನ್ನು ಪ್ರತಿ ದಿನ ಆಫೀಸ್ಗೆ ಅಲೆದಾಡಿಸುತ್ತಾರೆ ಆಫೀಸ್ಗೆ ಹೋದರೆ ಸರಿಯಾಗಿ ಸ್ಪಂದಿಸದಿರುವದು ಮತ್ತೊಂದು ಪ್ರಶ್ನೆಯಾಗಿದೆ... ಹೀಗಾಗಿ ಬೇಸತ್ತ ರೈತರು ನೇಗಿಲಯೋಗಿ ಸುರಕ್ಷಾ ರೈತ ಸಂಘದ ಸಮ್ಮುಖದಲ್ಲಿ ರೇಣುಕಾ ಶುಗರ್ಸ್ ಕಾರ್ಖಾನೆಗೆ ಸಂಬಂದಿಸಿದ ವಾಹನಗಳನ್ನು ತಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
lರೇಣುಕಾ ಶುಗರ್ಸ್ ಕೆನ್ ಅಧಿಕಾರಿ ಗೋಕಾಕ ಮತ್ತು ವಲಯ ಅಧಿಕಾರಿ ಚಟ್ನಿಸ್ ಹಾಗೂ ಸಿಬ್ಬಂದಿವರ್ಗ ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆಗೆ ಸ್ಪಂದಿಸಿ ಇನ್ನೂ ಎರಡು ದಿನಗಳಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ಕೊಟ್ಟ ನಂತರ ರೈತರು ಪ್ರತಿಭಟನೆ ಹಿಂಪಡೆದರು ಮತ್ತು ಇದೆ ರೀತಿ ಮತ್ತೋಮ್ಮೆ ಘಟನೆ ಮರುಕಳಿಸಿದರೆ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ರೈತರಾದ ಬಸನಗೌಡ ಪಾಟೀಲ, ಸೋಮಪ್ಪ ಮುರಗೋಡ, ಗಂಗಪ್ಪ ಸಂಗಣ್ಣವರ, ರುದ್ರಪ್ಪ ಕರಡಿ, ಪಕ್ಕೀರಗೌಡ ಪಾಟೀಲ,ಪುಂಡಲೀಕ ಲಮಾಣಿ, ಶಿವಾನಂದ ಪೂಜೇರಿ, ನಾಗಪ್ಪ ಏಣಗಿ, ಮಹಾಂತೇಶ ಹಮ್ಮನವರ ಇದ್ದರು.
Kshetra Samachara
02/01/2025 04:55 pm