ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅಪರಿಚಿತ ವೃದ್ಧನ ಶವ ಪತ್ತೆ, ನಾಯಿ ದಾಳಿ ಶಂಕೆ

ಬೆಳಗಾವಿ: ಬೆಳಗಾವಿಯ ಚಿದಂಬರ ನಗರದ ಮಂಗೇಶ್ ಪೆಟ್ರೋಲ್ ಬಂಕ್ ಹಿಂಬದಿಯಲ್ಲಿ ಅಪರಿಚಿತ ವೃದ್ಧನ ಶವ ಪತ್ತೆಯಾಗಿದೆ.‌ ವೃದ್ಧನ ಮೇಲೆ ಶ್ವಾನಗಳು ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.‌

ವ್ಯಕ್ತಿಯ ಶವ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.‌ ನಿರ್ಜನ ಪ್ರದೇಶದಲ್ಲಿ ಬಿದ್ದಿದ್ದ 60 ವರ್ಷ ವಯಸ್ಸಿನ ವ್ಯಕ್ತಿಯ ಶವ ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ.‌ ಸ್ಥಳಕ್ಕೆ ಉದ್ಯಮಭಾಗ ಪೊಲೀಸ್ ಠಾಣೆಯ ಸಿಪಿಐ ಧರೇಗೌಡ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉದ್ಯಮಭಾಗ ಪೊಲೀಸ್ ‌ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.‌

Edited By : Shivu K
PublicNext

PublicNext

04/01/2025 03:45 pm

Cinque Terre

27.59 K

Cinque Terre

0

ಸಂಬಂಧಿತ ಸುದ್ದಿ