ಬೆಳಗಾವಿ: ಕಳೆದ ಐದಾರು ದಿನದಿಂದ ಬೆಳಗಾವಿಯ ಅನಗೋಳನಲ್ಲಿ ಇರುವ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡಲು ಬಿಜೆಪಿ ಶಾಕಸ ಹಾಗೂ ಪಾಲಿಕೆ ಸದಸ್ಯರು ತಯಾರಿ ನಡೆಸಿದ್ದು, ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಮೇಲೆ ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದಾರೆ
ಬೆಳಗಾವಿಯ ಅನಗೋಳ ಗ್ರಾಮದಲ್ಲಿರುವ ಸಂಭಾಜೀ ಮಹಾರಾಜರ ಪುತ್ಥಳಿ ಅನಾವಾರಗೊಳಿಸಲು ಸಿದ್ಧತೆ ಪರಿಶೀಲನೆಗೆ ಆಗಮಿಸಿದ ಮೇಯರ್ ಸವಿತಾ ಕಾಂಬಳೆ ಹಾಗೂ ಉಪಮೇಯರ್ ಗೆ ಪಾಲಿಕೆ ಅಧಿಕಾರಿ ಲಕ್ಷ್ಮಿ ನಿಪ್ಪಾಣಕರ್ ಅವರು ಅನುಮತಿ ನಿರಾಕರಿಸಿದ್ದಾರೆ. ಈ ವೇಳೆ ಗರಂ ಆಗಿರುವ ಮೇಯರ್ ಸವಿತಾ ಕಾಂಬಳೆ ಅವರು, ಪುತ್ಥಳಿ ಸುತ್ತಲೂ ಇರುವ ಕಟ್ಟಿಗೆ ಹಾಗೂ ಹಸಿರು ಪರದೆ ಬಿಚ್ಚಿ. ಇಲ್ಲ ನಾನೇ ಪರದೆ ಬಿಚ್ಚಲಾ ಹೇಗೆ..? ಸ್ಥಳಕ್ಕೆ ಬರುವಂತೆ ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಎಂದು ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಮೇಲೆ ಮೇಯರ್ ಸವಿತಾ ಕಾಂಬಳೆ ಗರಂ ಆಗಿದ್ದಾರೆ. ಈ ವೇಳೆ ಮೇಯರ್ ಮುಂದೆ ಪಾಲಿಕೆ ಅಧಿಕಾರಿಗಳು ಅವರು ಸುಮ್ಮನೆ ನಿಂತಿದ್ದಾರೆ. .
PublicNext
05/01/2025 07:18 pm