ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಪ್ರತಿಮೆ ಅನಾವರಣ ವೇಳೆ ಜೈ ಮಹಾರಾಷ್ಟ್ರ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹ

ಬೆಳಗಾವಿ : ಅನಗೋಳದಲ್ಲಿ ಛತ್ರಪತಿ ಸಂಬಾಜಿ ಮಹಾರಾಜ ಪ್ರತಿಮೆ ಅನಾವರಣ ವೇಳೆ ಜಿಲ್ಲಾಡಳಿತದ ಆದೇಶ ಉಲ್ಲಂಘನೆ ಮಾಡಿದಲ್ಲದೆ ಜೈ ಮಹಾರಾಷ್ಟ್ರ ಎಂದು ನಾಡದ್ರೋಹ ಘೋಷಣೆ ಕೂಗಿದ ಮೇಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಲಾಯಿತು.

ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕಿತ್ತೂರು ಕರ್ನಾಟಕ ಸೇನೆ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.‌ ಜಿಲ್ಲಾಡಳಿತದದ ವಿರೋಧದ ನಡುವೆಯು ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ನಿಯಮಗಳನ್ನು ಗಾಳಿಗೆ ತೂರಿ ಒತ್ತಾಯಪೂರ್ವಕ ಮೂರ್ತಿ ಉದ್ಘಾಟನೆ ಮಾಡಿದ್ದು ಖಂಡನೀಯ.

ಮೂರ್ತಿ ಉದ್ಘಾಟನೆಗೆ ಮಹಾರಾಷ್ಟ್ರದ ಸಚಿವ ಶಿವೇಂದ್ರಸಿಂಹರಾಜೆ ಭೋಸಲೆ ಕರೆಯಿಸಿ ಅವರ ಕಡೆಯಿಂದ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿಸಿ ನಾಡದ್ರೋಹ ಎಸಗಿದ್ದಾರೆ. ಮಹಾರಾಷ್ಟ್ರ ಸಚಿವ ಜೈ ಮಹಾರಾಷ್ಟ್ರ ಎಂದಾಗ ಶಾಸಕ ಅಭಯ ಪಾಟೀಲ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ ಸವಿತಾ ಕಾಂಬಳೆಯವರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿ, ಕರ್ನಾಟಕದ ಜನತೆಗೆ ಮಾಡಿದ ಅಪಮಾನ ಮಾಡಿದ್ದಾರೆ ಹಾಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ಹೊರ ಹಾಕಿದರು.

Edited By : Shivu K
PublicNext

PublicNext

07/01/2025 01:57 pm

Cinque Terre

19.11 K

Cinque Terre

0

ಸಂಬಂಧಿತ ಸುದ್ದಿ