ಕಾಗವಾಡ: ವಿಶ್ವದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಕನ್ನಡಿಗನಿಗೆ ದಕ್ಷಿಣ ಭಾರತದ ಸಿಸ್ಮಾ ಅಧ್ಯಕ್ಷೀಯ ಪಟ್ಟ ಒಲಿದು ಬಂದಿದೆ. ಇದು ಇಡೀ ಕರುನಾಡಿಗೆ ಕೀರ್ತಿ ತಂದಿದೆ. ದಕ್ಷಿಣ ಭಾರತೀಯ ಸಕ್ಕರೆ ಕಾರ್ಖಾನೆಗಳ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಸಿಸ್ಮಾ ಸಂಸ್ಥೆಯು ಇಡೀ ದಕ್ಷಿಣ ಭಾರತದ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ್ ಅವರ ಪುತ್ರ ಯೋಗೇಶ ಪಾಟೀಲ್ ಅವರಿಗೆ ಅಧ್ಯಕ್ಷ ಪಟ್ಟ ನೀಡಿದೆ.
ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಆಯೋಜಿಸಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿಸ್ಮಾ ಅಧ್ಯಕ್ಷ ಯೋಗೇಶ್ ಪಾಟೀಲ್ ಅವರಿಗೆ ತಾಲೂಕಿನ ರೈತರಿಂದ ಸತ್ಕಾರ ಮಾಡುವ ಮೂಲಕ ಅಭಿನಂದನೆಗಳ ಮಹಾಪೂರ ಹರಿದು ಬಂತು.
ದೇಶದಲ್ಲೇ ಇದೆ ಮೊಟ್ಟ ಮೊದಲ ಬಾರಿಗೆ ಇಂತಹ ಉನ್ನತ ಹುದ್ದೆ ಒಲಿದು ಬಂದಿದ್ದು ಕನ್ನಡಿಗರೇ ಹೆಮ್ಮೆ ಪಡುವಂತಾಗಿದೆ. ಕಬ್ಬು ಬೆಳೆಗಾರರಿಗೆ ಸರ್ಕಾರ ಮಟ್ಟದಲ್ಲಿ ಹೆಚ್ಚಿನ ಬೆಲೆ ಮತ್ತು ಹೆಚ್ಚು ಇಳುವರಿ ನೀಡುವ ತಳಿಗಳ ಅಭಿವೃದ್ಧಿ ಹಾಗೂ ಕಾರ್ಖಾನೆಗಳ ಕೂಲಿ ಕಾರ್ಮಿಕರ ವೇತನಗಳಲ್ಲಿ ಬದಲಾವಣೆಗಾಗಿ ಶ್ರಮಿಸುವುದಾಗಿ ಗುರಿ ನನ್ನದಾಗಿದೆ ಎಂದಿದ್ದಾರೆ. ಒಟ್ಟಾರೆ ಭಾರತದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಉನ್ನತ ಹುದ್ದೆಯನ್ನೇರಿದ ಯೋಗೇಶ್ ಅವರ ಸಾಧನೆ ಯುವಕರಿಗೆ ಮಾದರಿಯಾಗಿದೆ.
PublicNext
08/01/2025 12:03 pm