ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ: ಶಾಲೆಯ ಸಮೀಪವೆ ವಿದ್ಯುತ್ ಪರಿವರ್ತಕ - ಜೀವಭಯದಲ್ಲಿ ಪಾಲಕರು

ಅಥಣಿ: ಶಾಲಾ ಸಮೀಪವಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ಜೋತು ಬಿದ್ದ ವಿದ್ಯುತ್ ತಂತಿಗಳಿಂದ ಜೀವ ಭಯದಲ್ಲಿ ಶಾಲೆಗೆ ಬರುತ್ತಿರುವ ಮಕ್ಕಳು ಒಂದೆಡೆಯಾದ್ರೆ, ನೆಲಕ್ಕೆ ತೀರ ಹತ್ತಿರವಿರುವ ವಿದ್ಯುತ್ ತಂತಿಗಳಿಂದ ಜಾನುವಾರುಗಳಿಗೂ ಆಪತ್ತು ಬರಬಹುದು ಅನ್ನುವ ಆತಂಕ ಜನರಲ್ಲಿ ಮನೆಮಾಡಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಸರ್ಕಾರಿ ಶಾಲೆಯ ಹಿಂಬದಿ ಇರುವ ವಿದ್ಯುತ್ ಪರಿವರ್ತಕದ ಕಥೆ ಇದು, ಗ್ರಾಮದ ಬಹುಪಾಲು ಜನರ ಮನೆಗಳಿಗೆ ಇಲ್ಲಿಂದಲೇ ವಿದ್ಯುತ್ ಪ್ರವಹಿಸುತ್ತಿದೆ. ಸುಮಾರು 10 ವರ್ಷಗಳ ಹಿಂದೆ ಜೋಡಣೆ ಮಾಡಿದ ವಿದ್ಯುತ್ ಪರಿವರ್ತಕ ಹಾಗೂ ಕಂಬದ ತಂತಿಗಳು ನೆಲದಿಂದ ಕೇವಲ ಎರಡು ಅಡಿ ಅಂತರದಲ್ಲಿವೆ. ಇದರಿಂದ ಜನ-ಜಾನುವಾರುಗಳಿಗೂ ಆತಂಕ ಎದುರಾಗಿದೆ.

ಕೈಗೆಟಕುವ ಅಂತರದಲ್ಲಿರುವ ವಿದ್ಯುತ್ ತಂತಿಗಳಿಂದಾಗುವ ಅವಘಡಗಳ ಬಗ್ಗೆ ಈಗಾಗಲೆ ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು ಹೆಸ್ಕಾಂ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸಾರ್ವಜಕ ವಲಯಗಳಲ್ಲಿ ಅನಾಹುತಕ್ಕೆ ಅಹ್ವಾನ ನೀಡುತ್ತಿರುವ ವಿದ್ಯುತ್ ತಂತಿಗಳ ಬದಲಾವಣೆ ಅನಿವಾರ್ಯವಾಗಿದ್ದು. ಹೆಸ್ಕಾಂ ಇಲಾಖೆ ಅವಘಡಕ್ಕೂ ಮುನ್ನ ಎಚ್ಚೆತ್ತುಕೊಂಡು ಸಮಸ್ಯೆ ಬಗೆ ಹರಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Edited By : Shivu K
PublicNext

PublicNext

07/01/2025 10:53 am

Cinque Terre

24.58 K

Cinque Terre

0

ಸಂಬಂಧಿತ ಸುದ್ದಿ