ಬೆಳಗಾವಿ : ಬೆಳಗಾವಿ ಬಿಮ್ಸ್ ನಲ್ಲಿ ಹತ್ತಾರು ಅವಾಂತರಗಳು ಆಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ಈ ಸಲ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ಶುದ್ಧ ಕುಡಿಯುವ ನೀರಿನ ಘಟಕ ತುಕ್ಕು ಹಿಡಿದು ಹೋಗಿದ್ದು, ಕಳೆದ ಐದಾರು ವರ್ಷದಿಂದ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ.
ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್ ಮುಂದೆ ಕಳೆದ ಐದಾರು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ತುಕ್ಕು ಹಿಡಿದು ಹೋಗಿದೆ. ಇದು ನಿರ್ವಹಣೆ ಆಗದೆ ಇರಲು ಪಾಲಿಕೆ ಅಧಿಕಾರಿಗಳೆ ಕಾರಣ, 2018 ರಲ್ಲಿ ವಾಟರ್ ಬೋರ್ಡ್ ವತಿಯಿಂದ ನಗರದ ಹಲವೆಡೆ ಕುಡಿಯುವ ನೀರಿನ ಘಟಕಗಳ ನಿರ್ಮಾಣ ಮಾಡಲಾಗಿದೆ. ಆದರೆ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಇರುವ ಈ ಶುದ್ಧ ಕುಡಿಯುವ ನೀರಿನ ಘಟಕ ಪಾಲಿಕೆಗೆ ಹಸ್ತಾಂತರವಾಗದೆ ಹಾಗೆ ಉಳಿದು ಬಿಟ್ಟಿದೆ.
ಪಾಲಿಕೆಗೆ ಹಸ್ತಾಂತರವಾಗದ ಕಾರಣ ನಿರ್ವಣೆ ಇಲ್ಲದೆ ತುಕ್ಕು ಹಿಡಿದು ಹೋಗಿದೆ. ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಆಯುಕ್ತೆ "ಶುಭ' ಅವರು, 2018 ರಲ್ಲಿ ವಾಟರ್ ಸಪ್ಲೈ ಬೋರ್ಡ್ ಅವರು ನಡೆಸುತ್ತಿದ್ದರು, ಆದಾದ ಬಳಿಕ ಕೆಯುಡಿಎಫ್ ಸಿ ಯವರು ಹಸ್ತಾಂತರ ಮಾಡಿದ್ದಾರೆ. ಆದರೆ ಬಿಮ್ಸ್ ಆವರಣದಲ್ಲಿ ಇರುವ ಆರೋ ಪ್ಲಾಂಟ್ ಹಸ್ತಾಂತರವಾಗಿಲ್ಲ. ಆದರೆ ಸದ್ಯದಲ್ಲೇ ಕೆಯುಡಿಎಫ್ ಸಿ ಅವರಿಂದ ತೆಗೆದುಕೊಂಡು ಎರಡು ವಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಇನ್ನೂ ಬಿಮ್ಸ್ ಆಸ್ಪತ್ರೆಯಲ್ಲಿ ಬರುವ ರೋಗಿಗಳ ಪೈಕಿ 50% ರೋಗಿಗಳು ಹೆರಿಗೆ ವಾರ್ಡ್ ಗೆ ಬರುತ್ತಾರೆ. ಬರುವ ಬಡ ಹೊರ ರೋಗಿಗಳು ಹೊರಗಡೆ ದುಬಾರಿ ಬೆಲೆಗೆ ನೀರು ಖರೀದಿಸಿ ಕುಡಿಯಲು ಸಾಧ್ಯವಿಲ್ಲ. ಹಾಗಾಗಿ ಕುಡಿಯಲು ಯೋಗ್ಯವಲ್ಲದ ನೀರು ಕುಡಿಯುತ್ತಾರೆ. ಹಾಗಾಗಿ ಈ ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಆದ್ರೆ ಎಲ್ಲರಿಗೂ ಅನುಕೂಲ ಆಗಲಿದೆ.
ಇನ್ನೂ ಕೆಯುಡಿಎಫ್ ಸಿ ವತಿಯಿಂದ ಹಸ್ತಾಂತರ ಮಾಡಿಕೊಂಡ ಎರಡು ವಾರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಜನರ ಬಳಕೆಗೆ ತರುತ್ತೇವೆ ಎಂದಿರುವ ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆ "ಶುಭ" ಅವರು ತಾವು ಹೇಳಿದ ಮಾತು ಉಳಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.
ಪ್ರಲ್ಹಾದ ಪೂಜಾರಿ, ಬೆಳಗಾವಿ
Kshetra Samachara
08/01/2025 12:55 pm