ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಗವಾಡ: ಪಿಕೆಪಿಎಸ್ ಚುನಾವಣೆಯಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ

ಕಾಗವಾಡ: ವಿಧಾನಸಭಾ ಮತಕ್ಷೇತ್ರದ ಶಾಸಕ ರಾಜು ಕಾಗೆ ಹಾಗೂ ಕನ್ನಡ ಯುವಕ ಸಂಘದ ಅಧ್ಯಕ್ಷ ಶಿವಗೊಂಡ ಕಾಗೆ ಇವರ ನೇತೃತ್ವದಲ್ಲಿ ಉಗಾರ ಖುರ್ದ ಪಿಕೆಪಿಎಸ್ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಲ್ಲ 12 ಸದಸ್ಯರು ಭರ್ಜರಿ ಜಯ ಸಾಧಿಸಿದ್ದಾರೆ.

ರವಿವಾರದಂದು ಬೆಳಗಾವಿ ಜಿಲ್ಲೆಯ ಹೋರಾಟಗಾರರು ಕಾಗಬಾಡ ತಾಲೂಕಿನ ಉಗಾರದಲ್ಲಿ ಜರುಗಿದ ಚುನಾವಣೆಯಲ್ಲಿ ಬೆಳಿಗ್ಗೆ ಇಂದು ಸುಮಾರು ಒಂದು ಸಾವಿರ ಮತದಾರರು ಮತ ಚಲಾಯಿಸಿದರು. ಇದರಲ್ಲಿ ರಾಜು ಕಾಗೆ ಬೆಂಬಲಿತ ಸದಸ್ಯರು ಗೆಲವು ಸಾಧಿಸಿದ್ದಾರೆ.

ಈ ಚುನಾವಣೆಯಲ್ಲಿ ಜೈ ಭೇರಿ ಸಾಧಿಸಿದ ನೂತನ ಸದಸ್ಯರು ದೀಲಿಪ ವೆಂಕಟ ಹುಲ್ಲೋಳಿ, ಮಹಾದೇವ ಬಾಬು ಕಟಗೇರಿ, ಅಶೋಕ ಬಾಹುಸಾಬ ಘೋರುಶ, ದಾದು ಬಾಬು ಥೋರುವ, ಶಿವಾನಂದ ರಾವಸಾಬ ಕಟಗೇರಿ, ಇಂದುಮತಿ ಭೀಮು ಬಸ್ತವಾಡ, ಸುನೀತಾ ರಾವಸಾಬ ಜಾಯಗೊಂಡ, ಧನಪಾಲ ಭರಮು ವಾಘಮೋಡೆ, ಚಂದ್ರಕಾಂತ ನೇಮಣ್ಣಾ ಮಸೂಡಗೆ, ವಿಲಾಸ ಬೈರು ಚುಂಬಾರ ರಾಜಮನೆ, ಉಮೇಶ ಗಣಪತಿ ಸನದಿ, ಬಾಳಕೃಷ್ಣ ಬಸಗೌಡಾ ಪಾಟೀಲ ಜಯಗಳಿಸಿದ್ದಾರೆ.

ಚುನಾವಣೆ ಅಧಿಕಾರಿಯಾಗಿ ಸಹಾಯಕ‌ ನಿಬಂಧಕರಾದ ಎಂ ಎನ್ ನೂಲಿ, ಸಹಾಯಕರಾಗಿ ಪಿಕೆಪಿಎಸ್ ಕಾರ್ಯದರ್ಶಿ ಶಾಂತಿನಾಥ ಪಾಟೀಲ ಸಹಕರಿಸಿದರು.

ಜೈ ಭೇರಿ ಸಾಧಿಸಿದ ಎಲ್ಲ ಸದಸ್ಯರು ಗುಲಾಲು ಹಾರಿಸಿ ಪಟಾಕಿ ಸಿಡಿಸಿ ಸಂತೋಷ ಹಂಚಿಕೊಂಡರು.

Edited By : PublicNext Desk
Kshetra Samachara

Kshetra Samachara

07/01/2025 08:24 am

Cinque Terre

4.78 K

Cinque Terre

0

ಸಂಬಂಧಿತ ಸುದ್ದಿ