ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ; ಕೋಹಳ್ಳಿ ಗ್ರಾಮದಲ್ಲಿ ಸರಣಿ ಮನೆಗಳ್ಳತನ, ಆತಂಕದಲ್ಲಿ ಗ್ರಾಮಸ್ಥರು

ಅಥಣಿ: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಸುಮಾರು ಮೂರು ಮನೆಗಳ ಬೀಗ ಮುರಿದು ಕಳುವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಕಳ್ಳರು ಕೈಚಳಕ ತೋರಿದ್ದಾರೆ. ಗ್ರಾಮದ ಮಾರುತಿ ಜಂಬಗಿ, ಸತ್ಯವ್ವ ವಾಘಮೋರೆ, ಸಿದ್ದಪ್ಪ ಜಂಬಗಿ ಎಂಬುವವರಿಗೆ ಸೇರಿದ ಮನೆಗಳಿಗೆ ಕನ್ನ ಹಾಕಿದ ಖದೀಮರು ಒಂದು ಲಕ್ಷಕ್ಕೂ ಅಧಿಕ ನಗದು ಚಿನ್ನಾಭರಣ ದೋಚಿದ್ದಾರೆ.

ಘಟನೆಯಿಂದ ಗ್ರಾಮಸ್ಥರು ಭಯಭೀತಗೊಂಡಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

04/01/2025 07:54 pm

Cinque Terre

23.68 K

Cinque Terre

0

ಸಂಬಂಧಿತ ಸುದ್ದಿ