ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ತಿಗಡಿ ಹಿರೇಮಠದಲ್ಲಿ ಚಿನ್ನಾಭರಣ ಕದ್ದ ಖದೀಮರು

ಬೈಲಹೊಂಗಲ: ತಾಲೂಕಿನ ತಿಗಡಿಯ ಹಿರೇಮಠದ ಮಂದಿರದಲ್ಲಿ ಕಳ್ಳತನ ನಡೆದಿದ್ದು ಸುಮಾರು 30 ತೊಲೆಗೂ ಹೆಚ್ಚು ಚಿನ್ನಾಭರಣ ಕಳ್ಳತನವಾದ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಶನಿವಾರ ತಿಗಡಿ ಹಿರೇಮಠದ ಮಂದಿರದಲ್ಲಿ ಪೂಜಾ ಕೈಂಕರ್ಯ ಮುಗಿಸಿ ಕೀಲಿ ಹಾಕಿದ್ದ ಮಂದಿರವನ್ನು ಯಾರು ದುಷ್ಕರ್ಮಿಗಳು ಕನ್ನ ಹಾಕಿ ದೇವಸ್ಥಾನದಲ್ಲಿನ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.

ಭಾನುವಾರ ಬೆಳಗ್ಗೆ ದೇವಸ್ಥಾನದ ಪೂಜೆ ಸಲ್ಲಿಸಲು ವೇಳೆ ಕಳ್ಳತನ ನಡೆದ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸ್ ಶ್ವಾನದಳ ಹಾಗೂ ಸಿಪಿಐ ಪಿ.ವಿ.ಸಾಲಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Shivu K
PublicNext

PublicNext

05/01/2025 01:38 pm

Cinque Terre

37.4 K

Cinque Terre

0

ಸಂಬಂಧಿತ ಸುದ್ದಿ