ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ನಾಲ್ವರಿಂದ ರೈತನ ಕಿಡ್ನಾಪ್ - ನಂತರ ನಡೆದಿದ್ದೇನು..?

ಬೆಳಗಾವಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಅಪಹರಿಸಿ ಊರೂರು ತಿರುಗಾಡಿಸಿ ನಡು ಬೀದಿಯಲ್ಲೇ ಮನಬಂದಂತೆ ಹಲ್ಲೆ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.‌

ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸರಿಂದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.‌ ಡಿಸೆಂಬರ್ 29ರಂದು ಖಾನಾಪೂರ ತಾಲೂಕಿನ ದೇವಲತ್ತಿ ಗ್ರಾಮದ ಮಹೇಶ ಸೀಮನಗೌಡರ (35) ಅವರು ಹೊಲದಲ್ಲಿ ಕೆಲಸ ಮಾಡುವ ವೇಳೆ ನಾಲ್ವರು ಅಪಹರಿಸಿದ್ದಾರೆ.‌ ಸ್ನೇಹಿತರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಗಲಾಟೆ ವಿಕೋಪಕ್ಕೆ ತಿರುಗಿ ಸೀಮನಗೌಡರ್ ಅವರನ್ನು ಅಪಹರಿಸಿ ಮನಬಂದಂತೆ ಥಳಿಸಲಾಗಿದೆ.

ರೈತ ಮಹೇಶ ಸೀಮನಗೌಡರ ಕಿಡ್ನಾಪ್ ಮಾಡಿದ ನಾಲ್ವರು ಲೋಕೋಳಿ, ಪಾರಿಶ್ವಾಡ, ಕೊಡಚವಾಡ, ಬಡಸ ಸೇರಿ ವಿವಿಧ ಊರುಗಳಲ್ಲಿ ಸುತ್ತಾಡಿಸಿದ್ದಾರೆ.‌ ವಿವಿಧ ಸ್ಥಳಗಳಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ ಪಾರಿಶ್ವಾಡ ಗ್ರಾಮದ ಬಳಿ ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದಾರೆ.‌ ನಡು ರಸ್ತೆಯಲ್ಲಿ ಹಲ್ಲೆಗೈದ ಆತಂಕಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.‌

ಹಲ್ಲೆಯ ವೇಳೆ ಕಿರುಚಾಟ ಕೇಳಿ ಮಹೇಶನನ್ನು ಪಾರಿಶ್ವಾಡ ಗ್ರಾಮಸ್ಥರು ರಕ್ಷಿಸಿ ಪಾರಿಶ್ವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹೇಶ್‌ಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.‌ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾನಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿದ ಬಳಿಕ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಡಿಸೆಂಬರ್ 30ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾದ ಬಳಿಕ ಪೊಲೀಸರಿಗೆ ಮಹೇಶ್ ದೂರು ನೀಡಿದ್ದಾನೆ. ಬಳಿಕ ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಲಾಡ್ಜ್‌ವೊಂದರಲ್ಲಿ ತಂಗಿದ್ದ ಸಂದೀಪ ಚಲವಾದಿ, ರಾಘವೇಂದ್ರ ಚಲವಾದಿ, ಮಾರುತಿ ಕಾಂಬಳೆ, ರಾಜಶೇಖರ ಹಿಂಡಲಗಿ ಎಂಬ ನಾಲ್ವರನ್ನು ಬಂಧಿಸಲಾಗಿದೆ.‌ ನಾಲ್ವರನ್ನು ಬಂಧಿಸಿ ನಿನ್ನೆ ಖಾನಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.‌

Edited By : Shivu K
PublicNext

PublicNext

07/01/2025 01:36 pm

Cinque Terre

36.17 K

Cinque Terre

0

ಸಂಬಂಧಿತ ಸುದ್ದಿ