ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿತ್ತೂರು : ಗಾಂಜಾ ಮಾರಾಟ - ಯುವಕರು ಅರೆಸ್ಟ್

ಚನ್ನಮ್ಮನ‌ ಕಿತ್ತೂರು : ಕಿತ್ತೂರಿನ ಬೀಡಿ ಕ್ರಾಸ್ ಬಳಿ ಇರುವ ಉಪ ಅರಣ್ಯ ಇಲಾಖೆ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಶಿವಾಜಿ ನಗರದ ನಿವಾಸಿ ಕಿರಣ ವಿರಕ್ತಮಠ ಹಾಗೂ ಬೈಲಹೊಂಗಲ‌ ತಾಲೂಕಿನ‌ ಹೊಗರ್ತಿ ಗ್ರಾಮದ ಯುವಕ ಕಲ್ಮೇಶ ಕೊಡಗನ್ನವರ (18) ಆರೋಪಿಗಳಾಗಿದ್ದಾರೆ.

ಅಂದಾಜು ರೂ. 10 ಸಾವಿರ ಮೌಲ್ಯದ 230ಗ್ರಾಂ ತೂಕದ ಗಾಂಜಾ ಮಾದಕ ಪದಾರ್ಥವನ್ನು ತಮ್ಮ ಹತ್ತಿರ ಇಟ್ಟುಕೊಂಡು ಜನರಿಗೆ ಮಾರಾಟ ಮಾಡಲು ಕಿತ್ತೂರಿಗೆ ಬೈಕ್ ಮೇಲೆ‌ ಬಂಧಿರುವ ವೇಳೆ ಪೋಲಿಸರು ಬಂಧಿಸಿದ್ದಾರೆ.

ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಪಿಎಸ್ಐ ಪ್ರವೀಣ ಗಂಗೊಳ, ಡಾ. ಅನ್ನಪೂರ್ಣ ಅಂಗಡಿ ಇದ್ದರು.

Edited By : Abhishek Kamoji
Kshetra Samachara

Kshetra Samachara

07/01/2025 07:00 pm

Cinque Terre

28.28 K

Cinque Terre

0

ಸಂಬಂಧಿತ ಸುದ್ದಿ