ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲಾ ಆವರಣಲ್ಲಿ ಬಿದ್ದ ಡ್ರೋನ್

ಬೆಳಗಾವಿ: ಶಾಲಾ ಆವರಣದಲ್ಲಿ ಅನಾಮಧೇಯ ಡ್ರೋನ್ ಬಿದ್ದ ಘಟನೆ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯ ಫಿನಿಕ್ಸ್ ಶಾಲೆಯಲ್ಲಿ ನಡೆದಿದೆ. ಇನ್ನೂ ಶಾಲಾ ಆವರಣದಲ್ಲಿ ಡ್ರೋನ್‌ ಬಿದ್ದ ಎರಡು ಗಂಟೆಗಳ ಕಾಲ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಕಂಗಾಲಾಗಿ ಕಾಲ ಕಳೆದಿದ್ದಾರೆ.

ಹೌದು ಶಾಲೆ ಬಿಡುವ ಸಂದರ್ಭದಲ್ಲಿ ಏಕಾಏಕಿ ಮೈದಾನದಲ್ಲಿ ವಿಮಾನ ಮಾದರಿಯ ಡ್ರೋನ್ ಬೀಳುತ್ತಿದ್ದಂತೆ ಆತಂಕದಲ್ಲಿದ್ದ ಶಿಕ್ಷಕರು, ತಕ್ಷಣ ಕಾಕತಿ ಠಾಣೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಡ್ರೋನ್ ವಶಕ್ಕೆ ತೆಗೆದುಕೊಂಡ ಪೊಲೀಸರು. ಡ್ರೋನ್ ಮೇಲಿದ್ದ ಸೀರಿಯಲ್ ನಂಬರ್ ದಿಂದ ವಿಳಾಸ ಪತ್ತೆ ಹಚ್ಚಿದ್ದಾರೆ.

ಖಾಸಗಿ ಕಂಪನಿಗೆ ಸೇರಿದ ಡ್ರೋನ್ ಎಂಬುದು ಬೆಳಕಿಗೆ ಬಂದಿದ್ದು, ಕಾಕತಿ ಠಾಣೆಗೆ ಕರೆಯಿಸಿಕೊಂಡು ಖಾಸಗಿ ಕಂಪನಿಯವರಿಂದ ದಾಖಲೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಜಮೀನು ಸರ್ವೇ ಮಾಡುವುದಕ್ಕೆ ಡ್ರೋನ್ ಬಳಸುತ್ತಿರುವುದಾಗಿ ಕಂಪನಿ ಸಿಬ್ಬಂದಿ ಹೇಳಿ ದಾಖಲೆಗಳನ್ನು ನೀಡಿದ್ದಾರೆ.

Edited By : Vinayak Patil
PublicNext

PublicNext

07/01/2025 04:50 pm

Cinque Terre

23.81 K

Cinque Terre

0

ಸಂಬಂಧಿತ ಸುದ್ದಿ