ರಾಯಭಾಗ: ಕಲಬುರಗಿ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಕುಡಚಿ ಮಾಜಿ ಶಾಸಕ ಪಿ ರಾಜೀವ್ ಮಾತನಾಡಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಕಿದ್ದಾರೆ.
ಈಗಾಗಲೆ ಗುತ್ತಿಗೆದಾರ ಆತ್ಮ ಹತ್ಯೆ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ಪಕ್ಷದಿಂದ ತಂಡರಚನೆ ಮಾಡಿದ್ದೂ ಶೀಘ್ರವೆ ಕಾಂಗ್ರೆಸ್ ಸರ್ಕಾರದ ನೀತಿ ಖಂಡಿಸಿ ಬೃಹತ್ ಹೋರಾಟ ಮಾಡಲಾಗುವುದು.
ಕಾಂಗ್ರೆಸ್ ಮುಖಂಡರು ಸುಪ್ರೀಂ ಕೋರ್ಟ್ ತೀರ್ಪುಗಳನ್ನ ಮೊದಲು ತಿಳಿದುಕೊಳ್ಳಬೇಕು, ಈಶ್ವರಪ್ಪ ಅವರ ವಿಚಾಯದಲ್ಲಿ ಕೈ ಬರಹದಿಂದ ಈಶ್ವರಪ್ಪ ಅವರ ಹೆಸರು ಉಲ್ಲೇಖವಿರಲಿಲ್ಲ ಅದು ಮೊಬೈಲ್ ನಲ್ಲಿ ಟೈಪ್ ಆಗಿತ್ತು ಸತ್ತ ಮೇಲೆ ಬೇರೆ ಯಾರೋ ಟೈಪ್ ಮಾಡಿರಬಹುದು ಎಂದು ನಾವು ಸಂಶಯ ಪಟ್ಟಿಲ್ಲ ನಮ್ಮ ಸರ್ಕಾರ ತಕ್ಷಣವೆ ಈಶ್ವರಪ್ಪ ಅವರ ಮೇಲೆ ಕ್ರಮ ಕೈಗೊಂಡಿತ್ತು. ಆದ್ರೆ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರ ಸಚಿನ್ ಪಾಂಚಾಳ ವಿಚಾರದಲ್ಲಿ ಅನ್ಯಾಯ ಮಾಡುತ್ತಿದೆ.
ಹಾಗೆ ನಾಗೇಂದ್ರ ಎಸ್ ಟಿ ಅನುದಾನದ ಹಣದಲ್ಲಿ ಲ್ಯಾಂಬೊರಾಗನಿ ಕಾರ್ ಹೆಂಡ, ಚಿನ್ನ ಖರೀದಿ ಮಾಡಿದ್ದ ಬಗ್ಗೆ ವರದಿ ಇದೆ, ಅಂಥವರಿಗೆ ಕಾಂಗ್ರೆಸ್ ಸರ್ಕಾರ ನಾಗೇಂದ್ರನಿಗೆ ಕ್ಲಿನ್ ಚಿಟ್ ಕೊಟ್ಟಿದೆ ಇಂತಹ ಸರ್ಕಾರ ನಮಗೆ ಬುದ್ದಿ ಹೇಳುತ್ತಿರುವುದು ನಾಚಿಕೆಗೆಡಿನ ಸಂಗತಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.
Kshetra Samachara
06/01/2025 08:52 pm