ಬೆಳಗಾವಿ: ಪರಪುರುಷನ ಜತೆಗೆ ಪರಾರಿಯಾಗಿರುವ ಐನಾತಿ ಪತ್ನಿಯೋರ್ವಳು ಚಿನ್ನ, ಹಣ, ಕಾರು ಹಾಗೂ ಮಕ್ಕಳೊಂದಿಗೆ ಗೃಹೋಪಯೋಗಿ ವಸ್ತುಗಳನ್ನು ದೋಚಿಕೊಂಡು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಪತ್ನಿ ಮನೆಯನ್ನೆ ದೋಚಿ ಹೋಗಿದ್ದಾಳೆ ಎಂದು ಪೊಲೀಸ್ ಠಾಣೆ ಮೆಟ್ಟಿಲು ಏರಿದ ನೊಂದ ಪತಿ ಆಸೀಫ್ ಜನವರಿ 2 ರಂದು ಬೆಳಗಾವಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಮಾಸಾಬಿ (28) ಆಸೀಫ್ ಸೈಯದ್ ಪರಾರಿಯಾದ ಮಹಿಳೆ, ಇದೇ ಗ್ರಾಮದ ಬಸವರಾಜ ಸೀತಿಮನಿ ಎಂಬಾತನ ಜೊತೆಗೆ ಪರಾರಿಯಾಗಿದ್ದಾಳೆ.
ಪರಾರಿಯಾಗುವ ವೇಳೆ ಮನೆಯಲ್ಲಿದ್ದ 60 ಗ್ರಾಂ ಚಿನ್ನ, ಐದು ಲಕ್ಷ ಹಣ ಹಾಗೂ ಕಾರ್ ಸಮೇತ ಪರಾರಿಯಾಗಿದ್ದಾಳೆ. ಅಲ್ಲದೇ ಆಸೀಫ್ ಅವರ ಸಂಪಾದನೆಯಲ್ಲಿ ಬಾಳೆಕುಂದ್ರಿ ಹಾಗೂ ನಂದಗಢದಲ್ಲಿ ಎರಡು ಸೈಟ್ ಪತ್ನಿ ಮಾಸಾಬಿ ಹೆಸರಿನಲ್ಲಿ ಮಾಡಿದ್ದಾನೆ. ಸೈಟ್ ದಾಖಲೆ, ಕಾರು, ಮನೆಯ ಸಿಲಿಂಡರ್ ಸೇರಿ ಎಲ್ಲಾ ವಸ್ತುಗಳ ಸಮೇತ ಪರಾರಿಯಾಗಿದ್ದಾಳೆ.
ಮೂಲತಃ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ನಿವಾಸಿಯಾಗಿದ್ದ ಆಸೀಪ್, ಪತ್ನಿಯ ಮಾರಿಹಾಳ ಗ್ರಾಮಕ್ಕೆ ಬಂದು ನೆಲೆಸಿದ್ದ. ಪತ್ನಿಗಾಗಿ ಅಪ್ಪ, ಅಮ್ಮನನ್ನು ದೂರ ಮಾಡಿ ಪತ್ನಿ ಜೊತೆ ಸಂಸಾರ ಮಾಡುತ್ತಿದ್ದ. ಆಸೀಫ್ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಆಸೀಪ್ ಪತ್ನಿ ಜೊತೆ ಪರಾರಿಯಾಗಿರುವ ಬಸವರಾಜ ಸೀತಿಮನಿಗೆ ಈ ಮೊದಲು ಮದುವೆಯಾಗಿ ಮಕ್ಕಳನ್ನು ಹೊಂದಿದ್ದಾನೆ. ಬಸವರಾಜ ಜೊತೆಗೆ ಕಾರಿನಲ್ಲಿ ಮಾಸಾಬಿ ಹಾಗೂ ಮಕ್ಕಳು ಪರಾರಿಯಾಗಿದ್ದಾರೆ ಎನ್ನಲಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಮ್ಮನ ಪತ್ನಿ ಹಾಗೂ ಮಕ್ಕಳನ್ನು ಹುಡುಕಿಕೊಡಿ ಎಂದು ಆಸೀಪ್ ಸಹೋದರ ಕೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಡ್ರೈವರ್ ವೃತ್ತಿಯಲ್ಲಿ ಇರೋ ಆಸೀಫ್ ದುಡಿದ ಸಂಪಾದನೆ ಎಲ್ಲವನ್ನು ಕಬಳಿಸಿ ಪರಪುರುಷನ ಜೊತೆ ಪತ್ನಿ ಓಡಿ ಹೋಗಿದ್ದು, ಕಿಡ್ನಾಪ್ ಪ್ರಕರಣ ದಾಖಲಿಸಲು ಆಸೀಫ್ ಮುಂದಾಗಿದ್ದಾರೆ.
PublicNext
05/01/2025 09:55 am