ಅಥಣಿ : ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಶಹಪುರ್ ಘಟಕದ ಸಾರಿಗೆ ಬಸ್ ವೃದ್ಧ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಸಾವನ್ನುತ್ತಿರುವ ಮಹಿಳೆಯನ್ನು ರಾಯಬಾಗ ತಾಲೂಕಿನ ಖೇಮದಾಪುರ ಗ್ರಾಮದ ನಾಗವ್ವ ಭೀಮಪ್ಪ ಬಾನಿ(65) ಎಂದು ಗುರುತಿಸಲಾಗಿದೆ.
ಅಥಣಿ ಸಾರಿಗೆ ಘಟಕದ ಬಸ್ ನಿಲ್ದಾಣದಲ್ಲಿನ ಅವೈಜ್ಞಾನಿಕ ಶೌಚಾಲಯದಿಂದ ಅನೇಕ ಪ್ರಯಾಣಿಕರಿಗೆ ಅಪಾಯದ ಸ್ಥಿತಿ ಇದ್ದು, ಶೌಚಕ್ಕೆ ಹೋಗಿದ್ದ ವೃದ್ಧ ಮಹಿಳೆ ಹೋಗುತ್ತಿದ್ದ ಸಂದರ್ಭದಲ್ಲಿ ಶಹಪುರ ಘಟಕದ ಸಾರಿಗೆ ಬಸ್ ವೇಗವಾಗಿ ಯಮ ರೂಪದಲ್ಲಿ ಬಂದು ಮಹಿಳೆಗೆ ಗುದ್ದಿದೆ.
ಪರಿಣಾಮ ಮಹಿಳೆಯ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಅಥಣಿ ಸಾರಿಗೆ ಬಸ್ ನಿಲ್ದಾಣದಲ್ಲಿ ತಿರುಗು ಇರುವ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳು ಇಲ್ಲದೆ ಇರುವುದು ಮತ್ತು ಸಾರಿಗೆ ಬಸ್ ಚಾಲಕ ನಿರ್ಲಕ್ಷ್ಯ ವಹಿಸಿ ವೇಗವಾಗಿ ಬಸ್ ಚಲಾಯಿಸಿದ್ದರಿಂದ ಈ ಅವಘಡ ಸಂಭವಿಸಿದೆ.ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
04/01/2025 09:27 pm