ಬೆಳಗಾವಿ: ರಾಜ್ಯದಲ್ಲಿ ಪ್ರತ್ಯೇಕ ವಕ್ಫ್ ಹೋರಾಟ ಆರಂಭಿಸಲು ಸಿದ್ಧತೆ ನಡೆಸಿರುವ ಬಿಜೆಪಿ ರೆಬಲ್ಸ್ ಪಡೆ ಒಂದೇ ತಿಂಗಳ ಅವಧಿಯಲ್ಲಿ ಎರಡನೇ ಸಲ ದೆಹಲಿಗೆ ಹಾರಿದ್ದಾರೆ.
ರೆಬಲ್ಸ್ ಒಂದೇ ತಿಂಗಳಲ್ಲಿ ದೆಹಲಿಗೆ ತೆರಳಿರುವ ಹಿನ್ನೆಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ವಕ್ಫ್ ಹೋರಾಟದ ಬಗ್ಗೆ ಕೇಂದ್ರ ನಾಯಕರಿಗೆ ಮಾಹಿತಿ ನೀಡಲಿರುವ ರೆಬಲ್ಸ್ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ಮಾಡುವ ಸಾಧ್ಯತೆಗಳಿವೆ.
ಇಂದು ಬೆಳಗಾವಿಯಿಂದ ದೆಹಲಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊರಟಿದ್ದು, ದೆಹಲಿಯಲ್ಲಿ ಯತ್ನಾಳ್, ಸೇರಿ ಅನೇಕರು ಠಿಕಾಣಿ ಹೊಡಲಿದ್ದಾರೆ. ಈ ವೇಳೆಯಲ್ಲಿ ಹಲವು ನಾಯಕರನ್ನು ಭೇಟಿಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ತಿಂಗಳು ದೆಹಲಿ ಭೇಟಿ ಸಂಧರ್ಭದಲ್ಲಿ ರಾಜನಾಥ್ ಸಿಂಗ್ ಭೇಟಿಯಾಗಿದ್ದ ನಾಯಕರು. ಈ ಬಾರಿ ಅಮಿತ್ ಷಾ ಭೇಟಿಗೆ ಯತ್ನಾಳ್, ಜಾರಕಿಹೊಳಿ ಟೀಂ ಸಮಯ ಕೇಳಿದ್ದಾರೆ ಎನ್ನಲಾಗಿದೆ.
PublicNext
06/01/2025 06:33 pm