ಬೆಳಗಾವಿ: ಬೆಳಗಾವಿಯಲ್ಲಿ ಛತ್ರಪತಿ ಸಂಭಾಜಿ ಮಾಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ಇನ್ನೂವರೆಗೆ ದೊರೆತಿಲ್ಲ, ಎರಡು ಗುಂಪುಗಳ ನಡುವೆ ಜಟಾಪಾಟಿ ಮುಂದುವರೆದಿದೆ.
ಬೆಳಗಾವಿ ತಾಲೂಕಿನ ಆನಗೋಳ ಗ್ರಾಮದ ಡಿವಿಎಸ್ ಚೌಕನಲ್ಲಿ ನಿರ್ಮಾಣವಾಗಿರೋ 21 ಅಡಿ ಎತ್ತರದ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದೆ. ಜಿಲ್ಲಾಡಳಿತ ವಿರೋಧದ ನಡುವೆ ಮೂರ್ತಿ ಅನಾವರಣ ಮಾಡುವುದಾಗಿ ಶಾಸಕ ಅಭಯ ಪಾಟೀಲ್ ಘೋಷಣೆ ಮಾಡಿದ್ದಾರೆ.
ಮೂರ್ತಿ ಅನಾವರಣ ಘೋಷಣೆ ಹಿನ್ನೆಲೆ ಸ್ಥಳದಲ್ಲೆ ಕೊಂಡುಸ್ಕರ್ ಬೆಂಬಲಿಗರು ಬೀಡುಬಿಟ್ಟಿದ್ದಾರೆ. ಛತ್ರಪತಿ ಸಂಭಾಜಿ ಮೂರ್ತಿ ಭವನಕ್ಕೆ ಅಳವಡಿಸಲಾಗುತ್ತಿದ್ದ ಲೈಟಿಂಗ್, ಧ್ವಜವನ್ನು ಕೊಂಡುಸ್ಕರ್ ಬೆಂಬಲಿಗರು ತೆರವು ಮಾಡಿದ್ದಾರೆ. ಈ ವೇಳೆ ಎರಡು ಗುಂಪುಗಳಾದ ಶಾಸಕ ಅಭಯ ಪಾಟೀಲ್ ಮತ್ತು ಕೊಂಡುಸ್ಕರ್ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.
ಸದ್ಯ ಸ್ಥಳದಲ್ಲೆ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯುವಕರು ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದಿದ್ದಾರೆ. ಸ್ಥಳದಲ್ಲೆ 7ಕೆಎಸ್ ಆರ್ ಪಿ ಪೊಲೀಸ್ ವಾಹನಗಳು, ಎಸಿಪಿ, ಮೂವರು ಸಿಪಿಐಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
PublicNext
05/01/2025 02:13 pm