ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಮುಂದುವರೆದ ಪ್ರತಿಮೆ ಅನಾವರಣ ಫೈಟ್- ಸಚಿವ ಸತೀಶ್ ಜಾರಕಿಹೊಳಿ ಎಂಟ್ರಿ

ಬೆಳಗಾವಿ: ಬೆಳಗಾವಿ ನಗರದ ಅನಗೋಳದಲ್ಲಿ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ವೀರ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರವಾಗಿ ಶಾಸಕ ಅಭಯ ಪಾಟೀಲ್ ಮತ್ತು ರಮಾಕಾಂತ ಕೊಂಡುಸ್ಕರ್ ಅವರ ನಡುವೆ ಜಟಾಪಟಿ ನಡೆದಿದ್ದು, ಇದರ ನಡುವೆ ಸಚಿವ ಸತೀಶ್ ಜಾರಕಿಹೊಳಿ ಎಂಟ್ರಿ ಆಗಿದ್ದಾರೆ.‌

ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ರಾಮಕಾಂತ ಕೊಂಡುಸ್ಕರ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು.

ವಿರೋಧದ ನಡುವೆಯೂ ಜನವರಿ 5ರಂದು ಪ್ರತಿಮೆ ಅನಾವರಣಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಹಾಗಾಗಿ ಸ್ಥಳೀಯ ಶಾಸಕ ಅಭಯ ಪಾಟೀಲ್ ಅವರು ಸಂಭಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆಗೆ ಸ್ವಾಗತ ಕೋರುವ ಬ್ಯಾನರ್ ಗಳನ್ನು ಅಳವಡಿಸುತ್ತಿದ್ದರು.

ಆದರೆ ಜನವರಿ 5ರಂದು ನಡೆಯಬೇಕಿದ್ದ ಕಾರ್ಯಕ್ರಮ ರದ್ದಾಗಿದೆ ಎಂದು ಪಾಲಿಕೆ ಅಧಿಕಾರಿಗಳಿಂದ ಬ್ಯಾನರ್ ತೆರವು ಮಾಡಿಸಲಾಗಿದೆ. ಇದರಿಂದ ಕೆರಳಿರುವ ಶಾಸಕ ಅಭಯ ಪಾಟೀಲ್ ಅವರು, ಭಾಗ್ಯನಗರದಲ್ಲಿ ಸ್ಥಳೀಯರ ಜೊತೆ ಸಭೆ ನಡೆಸಿದ್ದಾರೆ.‌

ಇಂದು ಬೆಳಗ್ಗೆ ಸಚಿವ ಸತೀಶ ಜಾರಕಿಹೊಳಿ ಅವರನ್ನು ಎಂಇಎಸ್ ಮುಖಂಡ ರಮಾಕಾಂತ ಕೊಂಡುಸ್ಕರ್ ಭೇಟಿ ಮಾಡಿ, ಕಾರ್ಯಕ್ರಮ ಮುಂದೂಡಿಕೆ ಮಾಡಲು ಒತ್ತಡ ಹೇರಿಸಿದ್ದಾರೆ ಎನ್ನಲಾಗಿದೆ.

ಬಳಿಕ ಪಾಲಿಕೆ ಆಯುಕ್ತರಿಂದ ಮೇಯರ್ ಸವಿತಾ ಪಾಟೀಲ್ ಗೆ ಪತ್ರ ಬರೆಯಲಾಗಿದ್ದು, ಕೆಲ ಸ್ಥಳೀಯರು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ‌. ಹಾಗಾಗಿ ಸರ್ಕಾರ ಪ್ರತಿಮೆ ಲೋಕಾರ್ಪಣೆಗೆ ಅನುಮತಿ ನೀಡಿಲ್ಲ. ಕಾರ್ಯಕ್ರಮ ಮುಂದೂಡಿರುವ ಬಗ್ಗೆ ಪತ್ರ ಬರೆದಿದ್ದಾರೆ.‌

ಜನವರಿ 5ರಂದು ಪ್ರತಿಮೆ ಲೋಕಾರ್ಪಣೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿರುವ ಶಾಸಕ ಅಭಯ ಪಾಟೀಲ್ ಮತ್ತು ಬೆಂಬಲಿಗರು ನಾಳೆ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.

Edited By : Ashok M
PublicNext

PublicNext

04/01/2025 01:56 pm

Cinque Terre

24.5 K

Cinque Terre

2

ಸಂಬಂಧಿತ ಸುದ್ದಿ