ಬೆಳಗಾವಿ: ಬಸ್ ದರ ಖಂಡಿಸಿ ಎಬಿಪಿವಿ ನೇತೃತ್ವದಲ್ಲಿ ಬೆಳಗಾವಿ ನಗರದ ಆರ್ ಪಿಡಿ ಸರ್ಕಲ್ ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗಿದೆ.
ಇಂದು ಆರ್ಪಿಡಿ ಕ್ರಾಸ್ ನಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟಿಸಿ ಕಾಲೇಜಿಗೆ ಬರೋ ಮಕ್ಕಳಿಗೆ ಸರಿಯಾದ ಬಸ್ ನ ವ್ಯವಸ್ಥೆ ಇಲ್ಲ, ಬೆಲೆ ಏರಿಕೆ ಸಾಮಾನ್ಯ ಜನರಿಗೆ ತೊಂದರೆ ಆಗಿದೆ. ಗ್ಯಾರಂಟಿ ಯೋಜನೆ ನೀಗಿಸಲು ದರ ಸರ್ಕಾರ ದರ ಏರಿಕೆ ಮಾಡುತ್ತಿದೆ ಎಂದು ಅಕ್ರೋಶ ಹೋರ ಹಾಕಿದರು.
ಈ ಕೂಡಲೇ ಬಸ್ ದರ ಇಳಿಕೆ ಮಾಡಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ಬಸ್ ಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
Kshetra Samachara
06/01/2025 04:39 pm