ಬೆಳಗಾವಿ : 75 ವರ್ಷದ ವಯೋ ವೃದ್ಧ ದಂಪತಿಗಳು ಪಡಬಾರದ ಕಷ್ಟ ಪಡುತ್ತ ಚರಂಡಿ
ಸ್ವಚ್ಛತೆಗಾಗಿ ಹರಸಾಹಸ ಪಡುತ್ತಿದ್ದಾರೆ. ಸ್ವತಃ ತಾವೇ ಬುಟ್ಟಿ ಸನಕೆ ತೆಗೆದುಕೊಂಡು ಚರಂಡಿ ಸ್ವಚ್ಛತೆ ಮುಂದಾಗಿದ್ದಾರೆ. ಹಾಗಾದರೆ ಗ್ರಾಮ ಪಂಚಾಯತ್ ಅಧಿಕಾರಿಗಳು ಸಿಬ್ಬಂದಿ ವರ್ಗ ಏನೂ ಮಾಡುತ್ತಿದ್ದೆ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಷ್ಮಣ ಭಜಂತ್ರಿ ಹಾಗೂ ಮಹಾದೇವಿ ಭಜಂತ್ರಿ ದಂಪತಿಗಳು ಗ್ರಾಮದ ಎಲ್ಲಾ ಸದಸ್ಯರಿಗೂ ಚರಂಡಿ ಸ್ವಚ್ಛತೆ ಬಗ್ಗೆ ಮನವಿ ಮಾಡಿದರು ಕೂಡ ಯಾರು ಸಹ ತಲೆ ಕೆಡಿಸಿಕೊಳ್ಳದೆ ಇದ್ದಾಗ ಸ್ವತಃ ತಾವೇ ಬುಟ್ಟಿ ಸಣಕೆ ತೆಗೆದುಕೊಂಡು ಚರಂಡಿ ಸ್ವಚ್ಛತೆ ಮಾಡಲು ಮುಂದಾಗಿದ್ದಾರೆ.
ಪ್ರತಿ ರಾತ್ರಿ ಸೊಳ್ಳೆಯ ಕಾಟ ಹಾಗೂ ಕೆಟ್ಟ ವಾಸನೆ ಇದ್ದ ಕಾರಣ ಇವರ ಮನವಿಗೆ ಯಾರು ಸ್ಪಂದನೆ ನೀಡದೆ ಹೋದಾಗ ರೋಷಿಹೋದ ದಂಪತಿಗಳು ಬೇರೆ ದಾರಿ ಕಾಣದೆ ತಾವೇ ಚರಂಡಿ ಸ್ವಚ್ಛತೆಗೆ ಸನ್ನದ್ಧರಾಗಿ ನಿಂತಿರುವುದನ್ನು ನೋಡಿದರೆ ಅಧಿಕಾರಿಗಳೇ ನೀವೆಲ್ಲಿ ಎನ್ನುವ ಸಾರ್ವಜನಿಕ ಕೂಗು ಕೇಳಿ ಬರುತ್ತಿದೆ. ಈ ಎಲ್ಲ ಘಟನೆ ನೋಡಿದರೆ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಹಾಗೂ ಆಡಳಿತ ಮಂಡಳಿಯ ಬೇಜವಾಬ್ದಾರಿ ಕಾಣಿಸುತ್ತಿದೆ.
ವರದಿ : ಚಿದಾನಂದ ಐಹೊಳೆ, ಪಬ್ಲಿಕ್ ನೆಕ್ಸ್ಟ್, ರಾಯಬಾಗ
Kshetra Samachara
06/01/2025 01:21 pm