ಬೆಳಗಾವಿ: ಜಿಲ್ಲೆಯ ಅನಗೋಳದ ಡಿವಿಎಸ್ ಚೌಕ್ ನಲ್ಲಿ ನಿರ್ಮಿಸಿರುವ ಛತ್ರಪತಿ ಸಂಬಾಜಿ ಮಹಾರಾಜರ ಪ್ರತಿಮೆ ಅನಧಿಕೃತವಾಗಿ ಅನಾವರಣವಾಗಿದ್ದು, ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಒಂದು ಕಾರ್ಯಕ್ರಮ ಆಗುತ್ತೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ತಿಳಿಸಿದರು.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿನ್ನೆ ಆಗಿರುವ ಕಾರ್ಯಕ್ರಮ ಅನಧಿಕೃತವಾಗಿ ಆಗಿದೆ. ಎರಡು ವರ್ಷದ ಹಿಂದೆ ಒಂದು ಠರಾವು ಪಾಸ್ ಮಾಡಿ ಪುತ್ಥಳಿ ಅನಾವರಣ ಮಾಡಬೇಕೆಂದು ಕೇಳಿದ್ದರು. ಸರ್ಕಾರಕ್ಕೆ ಕೂಡಾ ಒಂದು ವರದಿ ಹೋಗಿದೆ. ಸುಪ್ರೀಂ ಕೋರ್ಟ್ ಪ್ರಕಾರ ಡಿಸಿ ಅವರಿಂದ ಒಂದು ವರದಿ ಇರಬೇಕು ಅಂತಾ ಇದೆ. ಸರ್ಕಲ್ ನಿಂದ ಸಾರ್ವಜನಿಕರಿಗೆ ಯಾವುದೆ ಸಮಸ್ಯೆ ಆಗಬಾರದು ಎಂದು ಸರ್ಕಾರದಿಂದ ತಿರಸ್ಕಾರ ಆಗಿ ಒಂದು ಪತ್ರ ಬಂದಿದೆ. ಸಭೆ ಬಳಿಕ ನಾನು ಸಮಯ ಕೇಳಿದ್ದೆ ಆದರೆ ಅನಧಿಕೃತವಾಗಿ ಕಾರ್ಯಕ್ರಮ ನಡೆಸಿದ್ದಾರೆ. ಎಲ್ಲಾ ಪಕ್ಷದವರು, ಎಲ್ಲಾ ಧರ್ಮದವರು ಸಂಭಾಜಿ ಮಹಾರಾಜರ ಪುತ್ಥಳಿ ಅನಾವರಣ ಅದ್ಧೂರಿ ಆಚರಣೆಗೆ ಉತ್ಸುಕರಾಗಿದ್ದರು. ಕೆಲಸ ಅಪೂರ್ಣ ಆಗಿದೆ ಪುತ್ಥಳಿ ಉದ್ಘಾಟಣೆ ಬೇಡಾ ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಒಂದು ಕಾರ್ಯಕ್ರಮ ಆಗುತ್ತೆ ಎಂದರು.
ನಾನು ಹಾಗೂ ಪೊಲೀಸ್ ಕಮಿಷನರ್ ಮೊನ್ನೆ ರಾತ್ರಿ ಸಂಭಾಜಿ ಮಹಾರಾಜರ ಪುತ್ಥಳಿ ಇರುವ ಸ್ಥಳಕ್ಕೆ ಹೋಗಿ ಭೇಟಿ ಮಾಡಿ ಚರ್ಚೆ ಮಾಡಿದ್ವಿ. ಸ್ಥಳದಲ್ಲಿ ಮುಖಂಡರು ಹಾಗೂ ಗ್ರಾಮಸ್ಥರು ಬಂದಿದ್ದರು. ಉದ್ಘಾಟನೆ ಸಂದರ್ಭದಲ್ಲಿ ಪ್ರೋಟೊಕಾಲ್ ಪ್ರಕಾರ ನಡೆಯಬೇಕೆಂದು ಮನವಿ ಮಾಡಿದ್ದರು ಎಂದು ಹೇಳಿದರು.
Kshetra Samachara
06/01/2025 04:36 pm