ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ - ಸತ್ಕಾರ

ಬೈಲಹೊಂಗಲ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಪರಸ್ಪರ ಮೈಮನಸ್ಸು ತೊರೆದು ಶಿಕ್ಷಕರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು. 

ಪಟ್ಟಣದ ವಿದ್ಯಾನಗರದಲ್ಲಿರುವ ಗೃಹಕಚೇರಿಯಲ್ಲಿ ಬೈಲಹೊಂಗಲ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸತ್ಕರಿಸಿ ಅವರು ಮಾತನಾಡಿ, ಶಿಕ್ಷಕರು ಸಮಸ್ಯೆಗಳಿಗೆ ಸ್ಪಂದಿಸಬೇಕು. ಅಡ್ಡಗಾಲು ಹಾಕುವವರು ಎಲ್ಲ ಕ್ಷೇತ್ರದಲ್ಲೂ ಇರುತ್ತಾರೆ. ಆದರೆ ಅದನ್ನು ಮೆಟ್ಟಿನಿಂತು ಸೇವೆ ಸಲ್ಲಿಸಿದಾಗ ಮಾತ್ರ ಹೆಸರು ಬೆಳೆಯುತ್ತದೆ. ಎಲ್ಲರಲ್ಲಿಯೂ ಒಗ್ಗಟ್ಟು ಇರಬೇಕು. ಹೀಗಾದಾಗ ಮಾತ್ರ ಯಾವುದೇ ಕೆಲಸಗಳನ್ನು ಸರಾಗವಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು. 

ಕ.ರಾ.ಪ್ರಾ.ಶಿ.ಸಂಘದ ಉಪಾಧ್ಯಕ್ಷ ಎಸ್.ಡಿ.ಗಂಗಣ್ಣವರ, ಕ.ಸ.ರಾ.ನೌ.ಸಂಘದ ತಾಲೂಕಾಧ್ಯಕ್ಷ ಎಸ್.ಬಿ.ಕುಡಸೋಮಣ್ಣವರ, ಪ್ರಧಾನ ಗುರುಗಳ ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಫಕ್ಕೀರಸ್ವಾಮೀಮಠ,  ಬಿ.ವಿ.ಬಾಣಿ, ಬಿ.ಕೆ.ತಲ್ಲೂರ, ಎಸ್.ಜಿ.ಬೆಳಗಾವಿ, ವಾಯ್.ಬಿ.ದೇವಲಾಪೂರ, ಆಯ್.ಎಸ್.ತಿಗಡಿ, ಎಮ್.ಆರ್.ಬೋವಿ, ಬಿ.ಎಸ್.ಅಂಬರಶೆಟ್ಟಿ, ರಾಮಣ್ಣ ತೋರನಗಟ್ಟಿ, ಅನ್ವರ ದೇವರದರ, ಹಾಗೂ ಇನ್ನಿತರ ಪದಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆಯನ್ನು ಶಾಂತಿಯುತವಾಗಿ ಜರುಗಿತು. 

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸಾಮಾನ್ಯ ವರ್ಗದಿಂದ ಅಜ್ಜಪ್ಪ ಅಂಗಡಿ, ಅಭಿನಾಶ ಲಗಮನ್ನವರ, ಗುರುಬಸಪ್ಪ ಖನಗೌಡರ, ಗೊರೆಸಾಬ ಸುಲ್ತಾನಬಾಯಿ, ನಾಗಪ್ಪ ಗುಂಡಗವಿ, ಪುಂಡಲೀಕ ನಿಕ್ಕಮ್ಮನವರ, ಬಸವಂತಪ್ಪ ತೋರಣಗಟ್ಟಿ, ಬಸವರಾಜ ಜಕಾತಿ, ವೀರಯ್ಯ ಹಿರೇಮಠ, ಹಿಂದುಳಿದ ಅ ವರ್ಗದಿಂದ ಕಲ್ಲಪ್ಪ ಉಳ್ಳೇಗಡ್ಡಿ, ಹಿಂದುಳಿದ ಬ ವರ್ಗದಿಂದ ಗುರುಸಿದ್ದಪ್ಪ ಪಟ್ಟಣಶೆಟ್ಟಿ, ಮಹಿಳಾ ವರ್ಗದಿಂದ ಚನ್ನವ್ವ ಗಡದವರ, ಮಂಜುಳಾ ಮ್ಯಾಗೇರಿಮಠ, ಪರಿಶಿಷ್ಟ ಜಾತಿಯಿಂದ ಕಲ್ಲಪ್ಪ ಭಜಂತ್ರಿ ಚುನಾಯಿತರಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಠ ಪಂಗಡದಿಂದ ವಿಜಯಕುಮಾರ ಹುಣಶೀಕಟ್ಟಿ ಅವರನ್ನು ಅವಿರೋಧ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ರಿಟನಿರ್ಂಗ್ ಅಧಿಕಾರಿ ಬಸವರಾಜ ಹಡಪದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 

Edited By : PublicNext Desk
Kshetra Samachara

Kshetra Samachara

01/01/2025 07:34 pm

Cinque Terre

15.64 K

Cinque Terre

0

ಸಂಬಂಧಿತ ಸುದ್ದಿ