ಬೈಲಹೊಂಗಲ : ಬೀದರ ಜಿಲ್ಲೆಯ ಗುತ್ತಿಗೆದಾರ ಸಚಿನ ರೈಲಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ನೋವಿನ ಸಂಗತಿ. ಡೆತ್‍ನೋಟ್‍ನಲ್ಲಿ ಸಚಿವ ಪ್ರಿಯಾಂಕ್ ಹೆಸರು ಕೇಳಿಬಂದಿರುವುದರಿಂದ ಅವರು ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲದ ವತಿಯಿಂದ ಪ್ರತಿಭಟನೆ ಮೂಲಕ ಶುಕ್ರವಾರ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮಂಡಲ ಅಧ್ಯಕ್ಷ ಸುಭಾಸ ತುರಮರಿ ಮಾತನಾಡಿ, ಸಚಿನ್ ಅವರು ಸುಮಾರು 7 ಪುಟಗಳ ಡೆತ್‍ನೋಟ್‍ನಲ್ಲಿ ಸಚಿವರ ಆಪ್ತ ಸೇರಿದಂತೆ 8 ಜನರ ಹೆಸರುಗಳನ್ನು ಮರಣಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಆದ್ದರಿಂದ ಈ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸುತ್ತೆವೆ ಎಂದರು.
ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ ಮಾತನಾಡಿ, ಯುವ ಮೃತ ಸಚಿನ ಪಾಂಚಾಳ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು. ಅಲ್ಲದೇ ಪೂಜ್ಯ ಆಂದೋಲಾ ಶ್ರೀಗಳು, ಶಾಸಕ ಬಸವರಾಜ ಮತ್ತಿಮೂಡ್ ಸೇರಿದಂತೆ ಬಿಜೆಪಿ ಮುಖಂಡರ ಹತ್ಯೆಗೆ ರಾಜು ಕಪನೂರ ಸಂಚು ರೂಪಿಸಿದ್ದಾರೆ ಎಂದು ಮೃತ ಸಚಿನ ಪಾಂಚಾಳ ತಮ್ಮ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿದ್ದು, ಈ ಕುರಿತೂ ಸಿಬಿಐ ತನಿಖೆಯಾಗಬೇಕೆಂದರು.
ಮಂಡಲ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ ಕಾರಗಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಸಚೀನ ಕಡಿ, ಮುಖಂಡ ಮೋಹನ ಒಕ್ಕುಂದ, ಪಕ್ಷದ ಪದಾಧಿಕಾರಿಗಳಾದ ನಾಗಪ್ಪ ಸಂಗೊಳ್ಳಿ,ಗೌಡಪ್ಪ ಹೊಸಮನಿ, ಆತ್ಮಾನಂದ ಅಬ್ಬಾಯಿ, ಸುನೀಲ ಮಾಳೋದೆ, ಬಸವರಾಜ ಗಂಗಪ್ಪನವರ, ಉಮೇಶ ಸಂಗೊಳ್ಳಿ, ಉಳವಪ್ಪ ಬೂದಿಹಾಳ, ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.
Kshetra Samachara
03/01/2025 03:21 pm