ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ. ತೀವ್ರ ರಕ್ತಸ್ರಾವವಾಗಿ ಹೃದಯಾಘಾತ ಸಂಭವಿಸಿ ಬಾಣಂತಿ ಕೊನೆಯುಸಿರೆಳೆದಿದ್ದಾರೆ. ಹರಿಹರ ಮೂಲದ ಕವಿತಾ ಮೃತ ಬಾಣಂತಿ.
ಜನವರಿ 1ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಕವಿತಾ, ಜನವರಿ 3ರಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸ್ವಲ್ಪ ಸಮಯದ ಬಳಿಕ ಕವಿತಾಗೆ ತೀವ್ರ ರಕ್ತಸ್ರಾವ ಉಂಟಾಗಿ ಬಾಣಂತಿ ಸಾವನಪ್ಪಿದ್ದಾರೆ. ಈ ಸಂಬಂದ ಪಬ್ಲಿಕ್ ನೆಕ್ಟ್ಸ್ ಮಾಹಿತಿ ನೀಡಿದ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಹೆರಿಗೆಯಾದ ಕೆಲವೇ ಕ್ಷಣಕ್ಕೆ ಹೃದಯಾಘಾತ ಸಂಭವಿಸಿದೆ.
ಗರ್ಭ ಚೀಲದಲ್ಲಿ ನೀರಿನ ಅಂಶ ಸೋರಿಕೆಯಾಗಿ ಹೊರ ಬರುತ್ತದೆ. ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಈ ನೀರಿನ ಅಂಶ ರಕ್ತನಾಳಕ್ಕೆ ಸೇರುತ್ತದೆ. ಆಗ ತೀವ್ರ ರಕ್ತಸ್ರಾವ ಉಂಟಾಗುತ್ತದೆ. ಇಂತಹ ಸಂದರ್ಭ ಹೃದಯಾಘಾತ ಸಂಭವಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬಾಣಂತಿ ಸಾವು ಪ್ರಕರಣ ಸಂಬಂಧ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಮಟ್ಟದಲ್ಲಿ ಸಮಿತಿ ರಚಿಸಿ ಮಾಹಿತಿ ಪಡೆಯಲಾಗುತ್ತದೆ. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗು ಈ ಕುರಿತು ಸಂಪೂರ್ಣ ವಿವರಣೆ ನೀಡಬೇಕಾಗುತ್ತದೆ ಎಂದರು
PublicNext
04/01/2025 07:40 pm