ಹುಬ್ಬಳ್ಳಿ: ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ 58 ವರ್ಷದ ನಿಜಲಿಂಗಪ್ಪನ ಮೃತದೇಹವನ್ನು ತೆಗೆದುಕೊಂಡು ಹೋಗೋವಾಗ ನಿಜಲಿಂಗಪ್ಪ'ನ ಇಬ್ಬರು ಹೆಂಡತಿಯರು ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಲ್ಲಿಯೇ ಜಗಳವನ್ನು ಮಾಡಿ ಹೈಡ್ರಾಮ ನಡೆಸಿದ್ದಾರೆ.
ಮೂಲತಃ ಇಂಗಳಹಳ್ಳಿ ಗ್ರಾಮದ ನಿಜಲಿಂಗಪ್ಪ ಮೊದಲು ನಿರ್ಮಲಾ ಎಂಬಾಕೆಯನ್ನು ವಿವಾಹ ಆಗಿದ್ದ ನಂತರ ಕೆಲವು ವರ್ಷಗಳ ನಂತರ ತಾಜ್ ನಗರದ ಶಾಂತಾ ಎಂಬಾಕೆಯನ್ನು ಕೂಡ ವಿವಾಹ ಆಗಿ ಆಕೆಯ ಜೊತೆಯೇ ತಾಜ್ ನಗರದಲ್ಲಿ ವಾಸವಿದ್ದ. ಆದ್ರೆ ಈ ದುರ್ಘಟನೆ ಸಂಭವಿಸಿದ ನಂತರ ಮೊದಲನೆಯ ಹೆಂಡತಿ ಹಾಗೂ ಸಂಬಂಧಿಕರು ಶವವನ್ನು ನಾವು ತೆಗೆದುಕೊಂಡು ಹೋಗುತ್ತೇವೆ ಅನ್ನೋ ವಿಚಾರಕ್ಕೆ ಇಬ್ಬರು ಹೆಂಡತಿಯರು ಆಂಬ್ಯುಲೆನ್ಸ್ ನಲ್ಲಿಯೇ ಜಗಳ ಮಾಡಿದ ಪರಿಣಾಮ ಆಂಬ್ಯುಲೆನ್ಸ್ ಮತ್ತೆ ಶವಾಗಾರಕ್ಕೆ ಮರಳಿ ತಂದ ಘಟನೆ ನಡೆದಿದೆ.
ಆಗ ಶವಾಗಾರದ ಬಳಿಯಲ್ಲಿಯೇ ಇದ್ದ ಎಸಿಪಿ ಶಿವಪ್ರಕಾಶ್ ಹಾಗೂ ಇನ್ಸ್ಪೆಕ್ಟರ್ ಜಯಂತ ಗೌಳಿ ಮೃತಪಟ್ಟ ನಿಜಲಿಂಗಪ್ಪನ ಎರಡನೆ ಹೆಂಡತಿಯಾದ ಶಾಂತಾ ಹಾಗೂ ನಿರ್ಮಲಾಳಿಗೆ ಬುದ್ಧಿಯನ್ನು ಹೇಳಿ ಶವವನ್ನು ಇಬ್ಬರು ಸೇರಿ ಅಂತ್ಯ ಸಂಸ್ಕಾರ ಮಾಡಿ ಎಂದು ಬುದ್ಧಿ ಹೇಳಿ ಕಳಿಸಿದ್ದಾರೆ.
ಆದ್ರೆ ಎರಡನೇ ಪತ್ನಿ ಇಷ್ಟು ದಿನಗಳ ಕಾಲ ಆತ ಇದ್ದಾನೋ ಇಲ್ಲವೋ ಎಂಬುದನ್ನು ನೋಡಲು ಬಾರದ ಈತನ ಬಂಧುಗಳು ಇದೀಗ ಸರ್ಕಾರದಿಂದ ಪರಿಹಾರ ಸಿಗುತ್ತೆ ಎಂಬ ಕಾರಣಕ್ಕೆ ಬಂದಿದ್ದಾರೆ ಎಂಬ ಆರೋಪವನ್ನು ಮೊದಲನೆಯ ಹೆಂಡತಿ ಮೇಲೆ ಮಾಡಿದ್ದಾಳೆ.
ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2024 03:21 pm