ಹುಬ್ಬಳ್ಳಿ: ಕಳೆದ ಕೆಲವು ವರ್ಷಗಳಿಂದ ಸೈಬರ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಮಾಯಕರನ್ನೇ ಟಾರ್ಗೆಟ್ ಮಾಡಿದ ವಂಚಕರು ಸಾರ್ವಜನಿಕರಿಗೆ ಹಣದ ಆಸೆ ತೋರಿಸಿ, ಭಯ ಪಡಿಸಿ ಲಕ್ಷ ಲಕ್ಷ ಹಣ ವಂಚನೆ ಮಾಡ್ತಿದ್ದಾರೆ. ಪೊಲೀಸ್ ಇಲಾಖೆ ಎಷ್ಟೋ ಬಾರಿ ಆನ್ಲೈನ್ ವಂಚನೆ ಕುರಿತು ಜಾಗೃತಿ ಮೂಡಿಸುತ್ತಿದ್ರು, ಹಣದ ಆಸೆಗಾಗಿ ಜನರು ಕೂಡ ಸೈಬರ್ ವಂಚನೆಗೆ ಒಳಗಾಗುತ್ತಿದ್ದಾರೆ. ಗೃಹ ಸಚಿವಾಲಯ ಮತ್ತು ಪೊಲೀಸ್ ಇಲಾಖೆ ಫೋನ್ ಕಾಲರ್ ಟ್ಯೂನ್ ನಲ್ಲೂ ಸೈಬರ್ ವಂಚನೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಹುಬ್ಬಳ್ಳಿ ಧಾರವಾಡ ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಆನ್ಲೈನ್ ವಂಚನೆಗೆ ಜನರು ಬಲಿಯಾಗಿದ್ದಾರೆ. ಬ್ಯಾಂಕ್ ವಿಚಾರ, ಆನ್ಲೈನ್ ಜಾಬ್, ಹಣ ಹೂಡಿಕೆ ಆ್ಯಪ್, ವಿಡಿಯೋ ಕಾಲ್, ಈ ರೀತಿ ಹತ್ತಾರು ನೆಪ ಹೇಳಿ ಎಲ್ಲೋ ಕುಳಿತು ಸೈಬರ್ ವಂಚಕರು ಜನರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡ್ತಾನೇ ಬಂದಿದ್ದಾರೆ. ಈ ಸೈಬರ್ ವಂಚಕರು ಎಲ್ಲಿ ಇರ್ತಾರೋ ಏನ್ ಮಾಡ್ತಾರೋ ಒಂದುಚೂರು ಸುಳಿವು ಸಿಗುವುದಿಲ್ಲ.
ಆನ್ಲೈನ್ ನಲ್ಲಿ ಮೋಸ ಹೋಗಿ ಹಣ ಕಳೆದುಕೊಂಡು ಕೆಲ ಜನರು ಜೀವ ಕೂಡ ಬಿಟ್ಟಿದ್ದಾರೆ. ಕೆಲವೊಂದು ಲಿಂಕ್‌ಗಳನ್ನು ಹಾಕಿ ಅದರಿಂದ ಓಟಿಪಿ ಪಡೆದು ತಕ್ಷಣವೇ ಅವರ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಈ ಸೈಬರ್ ವಂಚನೆ ಗೃಹ ಸಚಿವಾಲಯಕ್ಕೆ ದೊಡ್ಡ ಚಾಲೆಂಜ್ ಆಗಿದೆ. ಈಗ ಗೃಹ ಸಚಿವಾಲಯದಿಂದ ಪ್ರತಿಯೊಂದು ಫೋನ್ ಕಾಲರ್ ಟ್ಯೂನ್ ಗೆ ಸೈಬರ್ ವಂಚನೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಈ ಬಗ್ಗೆ ಹೋಮ್ ಮಿನಿಸ್ಟರ್ ಏನು ಹೇಳಿದ್ದಾರೆ ಕೇಳಿ.
ಇನ್ನು ಈ ಸೈಬರ್ ವಂಚನೆ ಮಾಡುವವರು ಹೆಚ್ಚು ಹೊರ ರಾಜ್ಯ ಹಾಗೂ ಬೇರೆ ದೇಶದವರಾಗಿರುವ ಕಾರಣ, ಹಣ ಕಳೆದುಕೊಂಡವರಿಗೆ ಮರಳಿ ಹಣ ಕೊಡಿಸಲು ಸಾಧ್ಯವಾಗುತ್ತಿಲ್ಲ.
ಈ ಸೈಬರ್ ವಂಚನೆಗೆ ಕಡಿವಾಣ ಹಾಕಬೇಕಾದ್ರೆ ಸಾರ್ವಜನಿಕರೇ ನೀವೆ ಹುಷಾರ್ ಆಗಿರಬೇಕು. ಹಣದ ಆಸೆಗೆ ಬಲೆಗೆ ಬಿದ್ದು ನೀವು ಬಲಿ ಕ ಬಕ್ರಾ ಆಗಬೇಡಿ. ಓಟಿಪಿ, ಫೇಕ್ ಲಿಂಕ್‌ಗಳನ್ನು ಓಪನ್ ಮಾಡುವುದಕ್ಕಿಂತ ಮುಂಚೆ ಒಮ್ಮೆ ಯೋಚನೆ ಮಾಡಿ. ಸೈಬರ್ ವಂಚನೆ ಬಗ್ಗೆ ಇರಲಿ ಎಚ್ಚರ.... ಎಚ್ಚರ.....
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2024 08:28 pm