ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಯರೇಬೂದಿಹಾಳದಲ್ಲಿ ಅಕ್ರಮ ಮದ್ಯ ಮಾರಾಟ, ಆರೋಪಿ ಅಂದರ್ !

ಕುಂದಗೋಳ : ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಯರೇಬೂದಿಹಾಳ ಗ್ರಾಮದ ಗಂಗಾಧರ ಬಸವಣ್ಣೆಪ್ಪ ತಿರ್ಲಾಪೂರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಹೌದು ! ಡಿಸೆಂಬರ್ 25 ರಂದು ತಮ್ಮ ಶೆಡ್ ಮುಂಭಾಗದ ಕಟ್ಟೆಯ ಮೇಲೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗಂಗಾಧರ ಬಸವಣ್ಣೆಪ್ಪ ತಿರ್ಲಾಪೂರ ಎಂಬಾತನನ್ನು ಬಂಧಿಸಿದ ಪೊಲೀಸರು ಬಂಧಿತರಿಂದ 90 ಎಂ.ಎಲ್‌ ಅಳತೆಯ 910 ರೂಪಾಯಿ ಮೌಲ್ಯದ 14 ವಿಸ್ಕಿ ಮಾಂಕಿಟೋಸ್ ವಶಕ್ಕೆ ಪಡೆದಿದ್ದಾರೆ.

ಇದಲ್ಲದೆ ವ್ಯಕ್ತಿ ಕುಡಿಯಲು ಅದೇ ಸ್ಥಳದಲ್ಲಿ ಇತರರಿಗೆ ಅವಕಾಶ ನೀಡಿದ್ದ ಎನ್ನಲಾಗಿದೆ. ಈ ಪ್ರಕರಣದ ಕುರಿತು ಗುಡಗೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nirmala Aralikatti
Kshetra Samachara

Kshetra Samachara

27/12/2024 01:25 pm

Cinque Terre

16.09 K

Cinque Terre

0

ಸಂಬಂಧಿತ ಸುದ್ದಿ