ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್ ಷಡಾಕ್ಷರಿ ಪುನರಾಯ್ಕೆ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್ ಷಡಾಕ್ಷರಿ ಪುನರಾಯ್ಕೆಯಾಗಿದ್ದಾರೆ.ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಖಜಾಂಚಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಿಎಸ್ ಷಡಾಕ್ಷರಿ ಮತ್ತು ಖಜಾಂಚಿಯಾಗಿ ಶಿವರುದ್ರಯ್ಯನವರು ಆಯ್ಕೆಯಾಗಿದ್ದಾರೆ.

ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹಾಗೂ ಸಂಘದ ಮಾಜಿ ಅಧ್ಯಕ್ಷ ಬಿ.ಪಿ.ಮಂಜೇಗೌಡರ ಸಹೋದರ ಬಿ.ಪಿ.ಕೃಷ್ಣೇಗೌಡ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು ಅಂತಿಮವಾಗಿ ಸಿ.ಎಸ್ ಷಡಾಕ್ಷರಿ 507 ಮತಗಳನ್ನ ಪಡೆದರೆ , ಬಿಪಿ ಕೃಷ್ಣೇಗೌಡ 442 ಮತಗಳನ್ನು ಪಡೆದಿದ್ದಾರೆ. 67 ಮತಗಳಿಂದ ಷಡಾಕ್ಷರಿ ಮತ್ತೆ ಆಯ್ಕೆಯಾಗಿದ್ದಾರೆ.

ಇನ್ನೂ ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗರಾಜ್ ಆರ್ ಜುಮ್ಮನ್ನವರ 467 ಮತಗಳನ್ನ ಪಡೆದರೆ ಶಿವರುದ್ರಯ್ಯ ವಿವಿ 485 ಮತಗಳನ್ನ ಪಡೆಯುವ ಮೂಲಕ 18 ಮತಗಳಿಂದ ಜಯಗಳಿಸಿದ್ದಾರೆ.

Edited By : Abhishek Kamoji
PublicNext

PublicNext

27/12/2024 06:29 pm

Cinque Terre

144.1 K

Cinque Terre

1

ಸಂಬಂಧಿತ ಸುದ್ದಿ