ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (92) ದೀರ್ಘಕಾಲದ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ. ಇದೀಗ ನಿಖರ ಭವಿಷ್ಯಕ್ಕೆ ಹೆಸರುವಾಸಿಯಾಗಿರುವ ಕೋಡಿ ಶ್ರೀಗಳು ನುಡಿದಿದ್ದ ಭವಿಷ್ಯ ಸಹ ನಿಜವಾಗಿದೆ. ಇಬ್ಬರು ಪ್ರಧಾನಿಗಳು ಸಾವನ್ನಪ್ಪುತ್ತಾರೆ ಎಂದು ಶ್ರೀಗಳು ಹೇಳಿದ್ದರು. ಜೊತೆಗೆ ಪಂಚ ಭೂತಗಳಾದ ಭೂಮಿ, ಆಕಾಶ, ನೀರು, ವಾಯು, ಬೆಂಕಿಯಿಂದ ಭಾರೀ ತೊಂದರೆ ಉಂಟಾಗಲಿದೆ ಎಂದಿದ್ದರು. ಇದೀಗ ಸಿಂಗ್ ನಿಧನದೊಂದಿಗೆ ಅವರು ನುಡಿದಿದ್ದ ಪ್ರಮುಖ ಮಾತು ನಿಜವಾಗಿದೆ.
ನಾನು 4 ತಿಂಗಳ ಮೊದಲೇ ಹೇಳಿದಂತೆ ವಿದೇಶದಲ್ಲಿ ಭೀಕರ ಮಳೆಯಾಗ್ತದೆ, ಇಬ್ಬರು ಪ್ರಧಾನಿಗಳು ಸಾಯುತ್ತಾರೆ, ಸಾವು ನೋವುಗಳು ಸಂಭವಿಸುತ್ತವೆ, ದೊಡ್ಡ ದೊಡ್ಡವರಿಗೆ ಭಾರಿ ದುಃಖ, ನೋವು, ತಾಪ ಎದುರಾಗುತ್ತದೆ ಎಂದು ಹೇಳಿದ್ದೆನು. ಅದೇ ರೀತಿ ಆಗಿದೆ. ಈಗ ರಾಜ್ಯದಲ್ಲಿಯೂ ದೊಡ್ಡವರಿಗೆ ಕಷ್ಟ ಅನುಭವಿಸುವ ರೀತಿ ಪ್ರಕರಣಗಳು ನಡೆಯುತ್ತಿವೆ. ಕರೆಯದೇ ಬರುವವನು ಕೋಪ, ಬರೆಯದೇ ಹೋದವನು ಕಣ್ಣು, ಬರಿಗಾಲಲ್ಲಿ ನಡೆಯುವವನು ಮನಸ್ಸು ಈ ಮೂರದ್ದೂ ನಿಯತ್ತು ಇಟ್ಟುಕೊಂಡವರಿಗೆ ಯಾವ ಸಮಸ್ಯೆಯೂ ಬರುವುದಿಲ್ಲ. ಆದರೆ, ದುಡ್ಡು, ಅಧಿಕಾರ ಮುಖ್ಯವೆಂದು ಹೊರಟವರು ಅಧಃಪತನ ಕಾಣುತ್ತಿದ್ದಾರೆ ಎಂದು ಹೇಳಿದ್ದರು.
ಅವರು ಇಬ್ಬರು ಪ್ರಧಾನಿಗಳ ಸಾವಿನ ಭವಿಷ್ಯ ನುಡಿದಿದ್ದರಾದರೂ, ವರ್ಷದ ಕೊನೆಯ ಹಂತದಲ್ಲಿ ಮನಮೋಹನ್ ಸಿಂಗ್ ನಿಧನದೊಂದಿಗೆ ಅವರು ನುಡಿದಿದ್ದ ಪ್ರಮುಖ ಮಾತು ನಿಜವಾಗಿದೆ.
PublicNext
27/12/2024 04:50 pm