ತಮಿಳುನಾಡು : ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ. ಆಡಳಿತಾರೂಢ ಡಿಎಂಕೆ ಸರ್ಕಾರ ಆರೋಪಿಯ ಪರವಾಗಿ ನಿಂತಿರುವುದಾಗಿ ಬಿಜೆಪಿ ಆರೋಪಿಸುತ್ತಲೇ ಬಂದಿದೆ.
ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ದೂರನ್ನು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ವಿದ್ಯಾರ್ಥಿ ಸಂಘಟನೆಗಳಿಂದಲೂ ಪ್ರತಿಭಟನೆ ನಡೆಯುತ್ತಿದೆ. ಆದರೂ ಸರ್ಕಾರ ಮಾತ್ರ ಮೌನವಾಗಿದೆ ಎನ್ನುವುದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ಆರೋಪವಾಗಿದೆ.
ಇದೀಗ ಡಿಎಂಕೆ ಸರ್ಕಾರದ ವಿರುದ್ಧ ಖುದ್ದು ದಂಡಿಸಿಕೊಳ್ಳುವ ಶಿಕ್ಷೆಯನ್ನು ಅಣ್ಣಾಮಲೈ ತಾವೇ ಕೊಟ್ಟುಕೊಂಡಿದ್ದಾರೆ. ಈ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ನಾನು ಚಪ್ಪಲಿ ಧರಿಸುವುದಿಲ್ಲ, ಎಂದು ಪ್ರತಿಜ್ಞೆ ಮಾಡಿದ್ದಾರೆ.
ಮಾತ್ರವಲ್ಲದೇ, ದಿನಕ್ಕೆ ಆರು ಬಾರಿ ಚಾಟಿ ಏಟು, 48 ದಿನ ಉಪವಾಸ ಮಾಡುವುದಾಗಿಯೂ ಪ್ರತಿಜ್ಞೆ ಮಾಡಿದ್ದಾರೆ. ಅದರಂತೆ ತಮ್ಮ ನಿವಾಸದ ಎದುರು ಷರ್ಟ್ ಬಿಚ್ಚಿಕೊಂಡು ಅಣ್ಣಾಮಲೈ ಅವರು ಚಾಟಿಯಿಂದ ಏಟು ಕೊಟ್ಟುಕೊಳ್ಳುತ್ತಿರುವ ಶಾಕಿಂಗ್ ವಿಡಿಯೋ ವೈರಲ್ ಆಗಿದೆ.
PublicNext
27/12/2024 10:10 pm