ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹಂದಿ ಬ್ಯುಸಿನೆಸ್ ಮಾಡುತ್ತಿದ್ದ ಸ್ಯಾಮ್ಯುಯಲ್ ಕೊಲೆ ರಹಸ್ಯ ಬೆನ್ನತ್ತಿದ್ದ ಬೆಂಡಿಗೇರಿ ಪೊಲೀಸರು

ಹುಬ್ಬಳ್ಳಿ : ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ವಾಸವಿದ್ದ 38 ವರ್ಷದ ಸ್ಯಾಮ್ಯುಯಲ್ ಹುಬ್ಬಳ್ಳಿಯ-ಕಡಪಟ್ಟಿ ಹಳಿಯಾಳ ರಸ್ತೆಯಲ್ಲಿ ಹಂದಿ ಫಾರ್ಮ್ ಹೌಸ್ ನಡೆಸುತ್ತಿದ್ದ ಈತನನ್ನು ಗುರುವಾರ ಕೊಲೆ ಮಾಡಲಾಗಿದೆ.

ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಡಿಗೇರಿ ಠಾಣೆಯ ಪೊಲೀಸರ ತನಿಖೆ ಚುರುಕು ಗೊಂಡಿದೆ.

ಗುರುವಾರ ಸಂಜೆ ಸ್ಯಾಮ್ಯುಯಲ್ ಹಂದಿಗಳಿಗೆ ಆಹಾರ ಹಾಕಲು ಫಾರ್ಮ್ ಹೌಸ್ ನತ್ತ ಸಾಗಿದ್ದ.

ಸಾಯಂಕಾಲ 7.30 ರ ಸುಮಾರಿಗೆ ಹೆಂಡತಿಗೆ ಕರೆ ಮಾಡಿ ಯಾರೋ ಹೊಡೆಯುತ್ತಿದ್ದಾರೆ ಎಂದು ಹೇಳಿದ್ದ.

ಸ್ಯಾಮ್ಯುಯಲ್ ಸಾಯುವ ಮುನ್ನ ಏನೇನಾಯ್ತು ಎನ್ನುವುದನ್ನು ಸ್ಯಾಮ್ಯುಯಲ್ ಸಂಬಂಧಿ ಹೇಳಿದ್ದು ಹೀಗೆ

ಇನ್ನೂ ಕೊಲೆ ಮಾಡಿದ ಅನುಮಾನದ ಮೇಲೆ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಅಂತಾ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

ಸ್ಯಾಮ್ಯುಯಲ್ ಕೊಲೆ ಹಣ ಹಾಗೂ ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಸಂಶಯ ಹುಟ್ಟಿದ್ದು ಆದಷ್ಟು ಬೇಗ ಕೊಲೆ ಮಾಡಿದ್ದು ಯಾಕೆ,ಯಾರು ಎನು ಎಂಬ ರಹಸ್ಯವನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬೇಧಿಸಲಿದ್ದಾರೆ.

ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/12/2024 10:14 pm

Cinque Terre

95.5 K

Cinque Terre

0

ಸಂಬಂಧಿತ ಸುದ್ದಿ