ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಒಂದೆಡೆ ಗುಂಡು, ಮತ್ತೊಂದೆಡೆ ನೇಮ್ ಪ್ಲೇಟ್, ಡಬಲ್ ಸ್ಟಾರ್ - ಫೈರಿಂಗ್ ಸ್ಥಳ ಪರಿಶೀಲಿಸಿದ ಶಶಿಕುಮಾರ್

ಧಾರವಾಡ: ಚಡ್ಡಿ ಗ್ಯಾಂಗ್‌ನೊಂದಿಗೆ ಮನೆಯಲ್ಲಿ ಕಳುವು ಮಾಡುತ್ತಿದ್ದ ನಟೋರಿಯಸ್ ಆಂಧ್ರದ ಕರ್ನೂಲ್ ಮೂಲದ ಪಾಲಾ ವೆಂಕಟೇಶ್ವರರಾವ್ ಎಂಬಾತನ ಎರಡೂ ಕಾಲಿಗೆ ಧಾರವಾಡ ವಿದ್ಯಾಗಿರಿ ಪೊಲೀಸರು ಬೆಳ್ಳಂಬೆಳಿಗ್ಗೆ ಗುಂಡು ಹೊಡೆದಿದ್ದಾರೆ.

ಧಾರವಾಡದ ನವಲೂರಿನ ಮನೆಯೊಂದಕ್ಕೆ ಕನ್ನ ಹಾಕಿದ್ದ

ಪಾಲಾನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ರಾಯಾಪುರದ ಬಳಿ ಕರೆದುಕೊಂಡು ಹೋಗಿದ್ದಾರೆ. ಆಗ ಪೊಲೀಸರ ಮೇಲೆಯೇ ಆತ ದಾಳಿ ಮಾಡಿದ್ದಾನೆ. ಆರೋಪಿ ದಾಳಿ ಮಾಡಿದ ಪರಿಣಾಮ ಪಿಎಸ್‌ಐ ಸೇರಿ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿವೆ. ಅವರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

80ಕ್ಕೂ ಹೆಚ್ಚು ಕಳ್ಳತನದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಪಾಲಾ ವೆಂಕಟೇಶ್ವರರಾವ್ ಮೂಲತಃ ಆಂಧ್ರಪ್ರದೇಶದವನು. ಸುಮಾರು ಐದು ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದ ಪಾಲಾ ಈಗ ಪೊಲೀಸರ ವಶದಲ್ಲಿ ಆಸ್ಪತ್ರೆಯಲ್ಲಿದ್ದಾನೆ. ರಾಯಾಪುರದ ಬಳಿ ಹೆಚ್ಚಿನ ವಿಚಾರಣೆಗೆಂದು ಪೊಲೀಸರು ಪಾಲಾನನ್ನು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕೆ ಪ್ರತಿಯಾಗಿ ಪೊಲೀಸರು ಆತನ ಕಾಲಿಗೆ ಫೈರಿಂಗ್ ಮಾಡಿದ್ದಾರೆ.

ಫೈರಿಂಗ್ ನಡೆದ ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿಗಳಾದ ರವೀಶ್, ಮಹಾನಿಂಗ ನಂದಗಾವಿ, ಇನ್‌ಸ್ಪೆಕ್ಟರ್‌ಗಳು ಭೇಟಿ ನೀಡಿ ಪರಿಶೀಲಿಸಿದರು. ಫೈರಿಂಗ್ ನಡೆದ ಸ್ಥಳದಲ್ಲಿ ಗುಂಡುಗಳು, ಪಿಎಸ್ಐ ಪ್ರಮೋದ್ ಅವರ ನೇಮ್ ಪ್ಲೇಟ್, ಪೊಲೀಸ್ ಹೆಗಲ ಮೇಲಿನ ಸ್ಟಾರ್‌ಗಳು ಬಿದ್ದಿವೆ. ರಾಯಾಪುರದಲ್ಲೂ ಈ ಚಡ್ಡಿ ಗ್ಯಾಂಗ್ ಮನೆ ಕಳ್ಳತನಕ್ಕೆ ಮುಂದಾಗಿತ್ತು. ಸದ್ಯ ಪಾಲಾ ಪೊಲೀಸರ ವಶದಲ್ಲಿದ್ದು, ಆತನಿಂದ ಇನ್ನಷ್ಟು ಭಯಾನಕ ಮಾಹಿತಿಗಳು ಬಹಿರಂಗಗೊಳ್ಳುವ ಸಾಧ್ಯತೆ ಇದೆ.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

28/12/2024 08:23 pm

Cinque Terre

129.93 K

Cinque Terre

8

ಸಂಬಂಧಿತ ಸುದ್ದಿ