ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ತಂಗಿಯ ಗಂಡನಿಂದಲೇ ಹಂದಿ ವ್ಯಾಪಾರಿ ಸ್ಯಾಮ್ಯುಯಲ್ ಕೊಲೆ.. ನಾಲ್ವರನ್ನು ಜೈಲಿಗೆ ಅಟ್ಟಿದ ಇನ್ಸ್ಪೆಕ್ಟರ್ ನಾಯಕ & ಟೀಂ

ಹುಬ್ಬಳ್ಳಿ: ಹುಬ್ಬಳ್ಳಿಯ ಹೊರವಲಯದ ಕಡಪಟ್ಟ-ಹಳಿಯಾಳ ರಸ್ತೆಯಲ್ಲಿ ನಡೆದಿದ್ದ ಹಂದಿ ವ್ಯಾಪಾರಿ ಸ್ಯಾಮ್ಯುಯಲ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಸಕ್ಸಸ್ ಆಗಿದ್ದು. ಕೊಲೆ ಮಾಡಿದ್ದ 4 ಜನರನ್ನು ಕಂಬಿ ಹಿಂದೆ ತಳ್ಳಿದ್ದಾರೆ.

ಕಳೆದ ಶುಕ್ರವಾರ ರಾತ್ರಿ 7 ಗಂಟೆಯ ಸುಮಾರಿಗೆ ಕಡಪಟ್ಟಿ ಹಳಿಯಾಳ ರಸ್ತೆಯಲ್ಲಿ 38 ವರ್ಷದ ಸ್ಯಾಮ್ಯುಯಲ್ ಎಂಬಾತನ ಕಣ್ಣಿಗೆ ಕಾರದ ಪುಡಿಯನ್ನು ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಶವವನ್ನು ದುಸ್ಕರ್ಮಿಗಳ ಶವವನ್ನು ರಸ್ತೆ ಪಕ್ಕದ ಕಾಲುವೆಗೆ ಎಸೆದು ಪರಾರಿಯಾಗಿದ್ದರು. ಈ ಪ್ರಕರಣವನ್ನು ಬೆನ್ನತ್ತಿದ್ದ ಬೆಂಡಿಗೇರಿ ಠಾಣೆಯ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ ನೇತೃತ್ವದ ತಂಡ ನಾಲ್ಕು ಜನ ಆರೋಪಿಗಳನ್ನು ಬಂಧನ ಮಾಡಿ ವಿವಿಧ ಆಯಾಮಗಳಿಂದ ತನಿಖೆ ನಡೆಸಿದಾಗ ಇದೊಂದು ಹಣಕಾಸಿನ ಹಾಗೂ ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡಿರೋ ಮಾಹಿತಿ ಲಭ್ಯವಾಗಿದೆ.

ಸ್ಯಾಮ್ಯುಯಲ್ ಕೊಲೆಯಲ್ಲಿ ಸ್ಯಾಮ್ಯುಯಲ್ ತಂಗಿಯ ಗಂಡ ಟೈಟಸ್ ಬಾಬು ಪ್ರಮುಖ ಸೂತ್ರಧಾರಿಯಾಗಿದ್ದು ಸ್ಯಾಮ್ಯುಯಲ್ ಹಾಗೂ ಆತನ ಕುಟುಂಬದವರು ಟೈಟಸ್ ಬಾಬುವಿಗೆ ಬಹಳ ಕಾಟವನ್ನು ಕೊಟ್ಟಿದ್ರು ಹೀಗಾಗಿ ಈತ ತನ್ನ ಹೆಂಡತಿಯ ತಮ್ಮನಾದ ಸ್ಯಾಮ್ಯುಯಲ್ ಮೇಲೆ ಸೇಡಿಗಾಗಿ ಕಾಯುತ್ತಿದ್ದ. ಈ ನಡುವೆ ಸ್ಯಾಮ್ಯುಯಲ್ ಸ್ನೇಹಿತ ಸುಲೆಮಾನ್, ಮೊಹ್ಮದ್ ಷಾ, ಹಾಗೂ ಮೌಲಾಸಾಬ್ ಇವರು ಸ್ಯಾಮ್ಯುಯಲ್ ಗೆ ಸಾಲವನ್ನು ಕೊಟ್ಟಿರುತ್ತಾರೆ, ಆದ್ರೆ ಸ್ಯಾಮ್ಯುಯಲ್ ಇವರಿಗೆ ಹಣವನ್ನು ಹಿಂತಿರುಗಿಸದೆ ಸತಾಯಿಸುತ್ತಿದ್ದ ಹಿನ್ನೆಲೆ ಈತನನ್ನು ಮುಗಿಸಬೇಕು ಅಂತಾ ಸ್ನೇಹಿತರು ಕೂಡಾ ಪ್ಲ್ಯಾನ್ ಮಾಡಿದ್ದರು.

ನೀಲಿಜನ್ ಹಾಗೂ ಜನತಾ ಬಜಾರ್ ನಲ್ಲಿರುವ ಲಾಡ್ಜ್ ಒಂದರಲ್ಲಿ ನಾಲ್ಕು ಜನ ಸೇರಿಕೊಂಡು ಸ್ಯಾಮ್ಯುಯಲ್ ಮುಗಿಸಲು ಸ್ಕೆಚ್ ಹಾಕಿದ್ದರು. ಅದೇ ರೀತಿ ಈ ಹಿಂದೆ ಕೂಡಾ ಎರಡು ಬಾರಿ ಇವರು ಹಾಕಿದ ಪ್ಲ್ಯಾನ್ ಕೈ ಕೊಟ್ಟಿತ್ತು. ಆದ್ರೆ ಗುರುವಾರ ರಾತ್ರಿ ಮಾತ್ರ ಇವರೆಲ್ಲ ಹಾಕಿದ ಪ್ಲ್ಯಾನ್ ವರ್ಕ್ ಆಗಿ ಸ್ಯಾಮ್ಯುಯಲ್ ಮಷಣ ಸೇರಿದ್ದ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿದ ನಾಲ್ಕು ಆರೋಪಿಗಳನ್ನ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ,ಜೊತೆಗೆ ನ್ಯಾಯಾಲಯದ ಅನುಮತಿ ಪಡೆದು ಇವರನ್ನು ಇನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ಮತ್ತ್ಯಾರಾದ್ರು ಈ ಕೊಲೆಯ ಸಂಚಿನಲ್ಲಿ ಭಾಗಿಯಾಗಿದ್ದರಾ ಎಂಬ ಇನ್ನಷ್ಟು ಸತ್ಯವನ್ನು ಪೊಲೀಸರು ಹೊರಗೆ ಎಳೆಯಲಿದ್ದಾರೆ.

-ವಿನಯ ರೆಡ್ಡಿ ಕ್ರೈಂ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

29/12/2024 05:28 pm

Cinque Terre

200.01 K

Cinque Terre

5

ಸಂಬಂಧಿತ ಸುದ್ದಿ