ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಪಾಯಕ್ಕೆ ಬಾಯ್ತೆರೆದ ಕೈ ಬೋರ್ ಕೊಳವೆ ! ಪಿಡಿಓ ಡೋಂಟ್ ಕೇರ್

ಕುಂದಗೋಳ : ಎಲ್ಲೆಡೆ ಕೈ ಬೋರ್ ಕೊಳವೆ ಒಳಗೆ ಅದೆಷ್ಟೋ ಚಿಕ್ಕ ಮಕ್ಕಳು ಸಿಲುಕಿದ ಉದಾಹರಣೆ ಕಣ್ಮುಂದೆ ಇರುವಾಗಲೇ, ಹಿರೇಹರಕುಣಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೊಳವೆ ಬಾವಿ ಆಕಾರದ ಹಳೇ ಬೋರ್ ಒಂದನ್ನು ಬೇಕಾಬಿಟ್ಟಿಯಾಗಿ ಕೈ ಬಿಟ್ಟಿದ್ದಾರೆ.

ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ 4 ನೇ ವಾರ್ಡಿನಲ್ಲಿ ಯಾವುದೇ ರಕ್ಷಣೆ ಇಲ್ಲದೆ ಅಪಾಯಕ್ಕಾಗಿ ಕೈ ಬೋರ್ ಬಾಯ್ತೆರೆದು ಕೂತಿದೆ.

ಈ ಕೈ ಬೋರ್ ಅಕ್ಕಪಕ್ಕದಲ್ಲೇ ಮನೆಗಳಿದ್ದು ಚಿಕ್ಕ ಮಕ್ಕಳು ಓಡಾಟ, ಆಟೋಟ ಕೊಳವೆ ಪಕ್ಕದಲ್ಲೇ ನಡೆದು, ಯಾವಾಗ ಯಾವ ಅನಾಹುತ ಸಂಭವಿಸಿತ್ತದೆಯೋ ಗೊತ್ತಿಲ್ಲ.

ಮಳೆಗಾಲದಲ್ಲಿ ಕೊಳವೆ ತುಂಬಿ ರಸ್ತೆಯುದ್ದಕ್ಕೂ ನೀರು ಹರಿಯುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಕಣ್ಣಿಗೆ ಗೋಚರವಾಗುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಗಪ್ ಚುಪ್ ಇದ್ದಾರೆ.

ಸದ್ಯ ಹಿರೇಹರಕುಣಿ ಗ್ರಾಮದ ಕೊಳವೆ ಬಳಿ ಮಕ್ಕಳ ಓಡಾಟ ಹೆಚ್ಚಿದ್ದು, ರಕ್ಷಣೆ ಒದಗಿಸುವಂತೆ ಜನರು ಪಬ್ಲಿಕ್ ನೆಕ್ಸ್ಟ್'ಗೆ ಮನವಿ ಮಾಡಿದ್ದಾರೆ. ಸರ್ಕಾರವೇ ಕೊಳವೆ ಮುಚ್ಚಲು ರಕ್ಷಣೆ ಒದಗಿಸಲು ಮಾರ್ಗಸೂಚಿ ನೀಡಿದ್ದರೂ ಅಧಿಕಾರಿಗಳಿಗೆ ಗೊತ್ತೇ ಇಲ್ವಾ ಎಂಬುದು ಪ್ರಶ್ನೆಯಾಗಿದೆ?

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Manjunath H D
Kshetra Samachara

Kshetra Samachara

31/12/2024 05:14 pm

Cinque Terre

102.63 K

Cinque Terre

1

ಸಂಬಂಧಿತ ಸುದ್ದಿ